Latest

ಶ್ರಾವಣ ಮಾಸ, ಇದು ವರವ ಕೊಡುವ ಮಾಸ

ಶ್ರಾವಣ – ಮೊದಲ ಶುಕ್ರವಾರ

ಗುಂಪುಗೂಡದೆ ಸರಳವಾಗಿ ಆಚರಿಸಿ

 

ವಿದ್ವಾನ್ ಅರುಣ ಹೆಗಡೆ

 ಶ್ರಾವಣ ಮಾಸ, ಇದು ವರವ ಕೊಡುವ ಮಾಸ.  ಅತ್ಯಂತ ಶ್ರೇಷ್ಠವಾದ ಮಾಸವೂ, ಹಬ್ಬಗಳಾರಂಭದ ಮಾಸವೂ ಹೌದು.
 ಶ್ರೀಮಹಾವಿಷ್ಣುವಿನ ಜನ್ಮ ನಕ್ಷತ್ರ ಶ್ರಾವಣ. ಮಹಾವಿಷ್ಣುವನ್ನು, ಜಗನ್ಮಾತೆ ಶ್ರೀಮಹಾಲಕ್ಷ್ಮಿಯನ್ನು ಶ್ರಾವಣದ ಶುಕ್ರವಾರಗಳಲ್ಲೂ, ಶಿವ- ಶಿವಪರಿವಾರದೇವರನ್ನು ಸೋಮವಾರಗಳಲ್ಲೂ, ಸರ್ವಮಂಗಳದಾಯಿನಿ ಶ್ರೀಗೌರಿದೇವಿಯನ್ನು ಮಂಗಳವಾರದಂದೂ ವಿಶೇಷವಾಗಿ ಪೂಜಿಸುವ ಪುಣ್ಯ ಮಾಸ.
 ಮೌನವ್ರತ, ಏಕಭುಕ್ತ ಅಂದರೆ ಒಪ್ಪತ್ತು, ಮೌನವಾಗಿ ಸೂರ್ಯದೇವರ ಪೂಜೆಯಿಂದ ಆರೋಗ್ಯಭಾಗ್ಯ,  ಮಹಾಲಕ್ಷ್ಮಿಪೂಜೆಯಿಂದ ಸಂಪತ್ತು ಅಭಿವೃದ್ಧಿ, ಮಂಗಳಗೌರಿ ವ್ರತದಿಂದ ದೀರ್ಘ ಸುಮಾಂಗಲ್ಯ , ನಾಗಪಂಚಮಿ, ಬುಧ -ಬೃಹಸ್ಪತಿ ಪೂಜೆ,  ವರಮಹಾಲಕ್ಷ್ಮಿ ಪೂಜೆ ಉಪಾಕರ್ಮ, ಹಯಗ್ರೀವ ಜಯಂತಿ, ನೂಲು ಹುಣ್ಣಿಮೆ, ರಕ್ಷಾಬಂಧನ, ವಿಷ್ಣು, ಶಿವ ಹಾಗೂ ದೇವಿಗೆ ಪವಿತ್ರಾರೋಪಣೆ, ಶ್ರೀರಾಘವೇ೦ದ್ರ ಗುರುರಾಯರ ಆರಾಧನೆ, ಶ್ರೀಕೃಷ್ಣ ಜಯಂತಿ, ಕುಶಾಗ್ರಹಣ ಹಾಗೂ ಮತ್ತಿತರ ಆಚರಣೆಗಳು ಶ್ರಾವಣ ಹಬ್ಬಗಳು.
 ದೇವರ ಅಲಂಕಾರಕ್ಕೆ ಬಗೆಬಗೆಯ ರಂಗೋಲಿ, ತೋರಣ, ಹೂವಿನ ಹಾರ ಕುಂಕುಮಾರ್ಚನೆ  ಬಾಗಿನ ಕಲಶಾರಾಧನೆಗಳಿ೦ದ  ಅರ್ಚಿಸಿ, ಆರಾಧಿಸಬೇಕು .
 ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ..’ ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ ‘ಆರತಿ ಬೆಳಗಿರೆ ನಾರಿಯರು..’ ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳಬೇಕು. ಜೀವನಕ್ಕೆ ಮೆರಗು ನೀಡುವ ಅನುಗ್ರಹಿಸುವ ಮಹಾಲಕ್ಷ್ಮಿಯನ್ನು  ಸಾಧ್ಯವಾದಷ್ಟು ಆರಾಧನೆ, ಅರ್ಚನೆ ಮಾಡಿ ಪುಣ್ಯ ಗಳಿಸುವುದರ ಜತೆ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆಮಾಡಿ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕರಿಸಿ ಭಾಗ್ಯದ ಲಕ್ಷ್ಮಿ ಬಾರಮ್ಮ… ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಅ೦ತ ಪ್ರಾರ್ಥನೆಯೊಂದಿಗೆ ಗುಂಪುಗೂಡದೆ ಸರಳವಾಗಿ ಆಚರಿಸಿ. ದೇವೇಂದ್ರನಿಗೂ ಅನುಗ್ರಹಿಸಿದ ಕರುಣಾನಿಧಿಯೂ ಆದ ಮಹಾಲಕ್ಷ್ಮೀ ಗೆ ಕೆಳಗಿನ ಸ್ತೋತ್ರವನ್ನು  ತಪ್ಪದೇ  ಪಠಿಸಿ.
ಇಂದ್ರ ಉವಾಚ –
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ‖ 1 ‖
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 2 ‖
ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 3 ‖
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 4 ‖
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಽಸ್ತು ತೇ ‖ 5 ‖
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ‖ 6 ‖
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ‖ 7 ‖
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಽಸ್ತು ತೇ ‖ 8 ‖
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ |
ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖
ಹಬ್ಬದೂಟ ಭರ್ಜರಿಯಾಗಿರಲಿ, ಎಲ್ಲರಿಗೂ ಮಹಾಲಕ್ಷ್ಮೀದೇವಿ  ಸನ್ಮಂಗಳವನ್ನುಂಟು ಮಾಡಲಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button