Latest

ಇನ್ನೆರಡು ದಿನದಲ್ಲಿ ಆರಂಭವಾಗಲಿದೆ ದೇಶದ ಅತೀ ದೊಡ್ಡ ಕೊವಿಡ್ ಕೇರ್ ಸೆಂಟರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್‌ ಸೋಮವಾರದಿಂದ ಆಂಭವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನ ಮಾದವಾರದಲ್ಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರೋಗಲಕ್ಷಣ ಇಲ್ಲದ ಕೋವಿಡ್ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು, ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳ ತಂಡ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಆಯುಕ್ತರು ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ 5,000 ಹಾಸಿಗೆಗಳ ಸಾಮರ್ಥ್ಯವುಳ್ಳ ಹಾಲ್‌ಗಳು ಈಗಾಗಲೇ ಸಿದ್ದವಾಗಿದ್ದು ಸಾಮಗ್ರಿಗಳ ಬಾಡಿಗೆ ಹಾಗೂ ಖರೀದಿ ವಿಚಾರದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಗೊಂದಲಗಳಿದ್ದವು. 28 ಸಾಮಗ್ರಿಗಳಿಗೆ ಒಂದು ಸೆಟ್‌ಗೆ ಒಂದು ದಿನಕ್ಕೆ 800 ರೂಪಾಯಿ ನಿಗದಿ ಮಾಡಲಾಗಿದೆ ಎಂದರು.

5,000 ಬೆಡ್‌ಗಳಿಗೆ ಒಂದು ತಿಂಗಳಿಗೆ 12 ಕೋಟಿ ಬಾಡಿಗೆ ನೀಡಬೇಕಾಗುತ್ತಿತ್ತು. ಆದರೆ ಈಗ ಮರು ಬಳಕೆಯ ಮಂಚ ಹಾಸಿಗೆ ದಿಂಬು ಹೊದಿಕೆ ಸೇರಿದಂತೆ 7 ಸಾಮಾಗ್ರಿಗಳನ್ನ 2 ಕೋಟಿ 40 ಲಕ್ಷಕ್ಕೆ ಖರೀದಿ ಮಾಡಲಾಗುವುದು, ಉಳಿದ ಸಾಮಾಗ್ರಿಗಳಿಗೆ ತಿಂಗಳಿಗೆ 3 ಕೋಟಿ 25 ಲಕ್ಷ ಬಾಡಿಗೆ ನೀಡಲಾಗುವುದು ಎಂದು ತಿಳಿಸಿದರು.

Home add -Advt

 

Related Articles

Back to top button