ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನ ಐಗಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆವರಣದಲ್ಲಿ ಕಳೆದ ೨೨ ರಂದು ಕೇಂದ್ರ ಬಳಿ ವಿದ್ಯುತ್ ಅವಘಡದಿಂದ ಇಬ್ಬರು ಪವರ್ಮ್ಯಾನ್ ವಿದ್ಯುತ್ ಅವಘಡದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದರು.
ಪವರ್ಮ್ಯಾನ್ ಆಕಾಶ ಕುಲಕರ್ಣಿ (೨೩) ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ ಎಂದು ಕೊಕಟನೂರ ವಿದ್ಯುತ್ ವಿತರಣಾ ಕೇಂದ್ರ ಅಧಿಕಾರಿ ಸಿದ್ಧಾರ್ಥ ಮಹಿಷವಾಡಗಿ ತಿಳಿಸಿದರು.
ಪವರ್ ಮ್ಯಾನ್ ಆಕಾಶ ಕುಲಕರ್ಣಿ ಗಂಭೀರವಾಗಿ ಗಾಯಗೊಂಡಿದ್ದ ಹಾಗೂ ಇನ್ನೋರ್ವ ರಾವಸಾಬ ಜಾಧವ ಸಣ್ಣ ಪುಟ್ಟ ಗಾಯಗಳಾಗಿದ್ದರು ಸ್ಥಳೀಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಘಟನೆ ವಿವರ: ಐಗಳಿ ೧೧೦ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಬ್ರೇಕರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಾಗ ರೀಪೆರಿಗೆ ಕಂಬದ ಮೇಲೆ ಹತ್ತಿದಾಗ ವಿದ್ಯುತ್ ಅವಘಡ ಸಂಭವಿಸಿದೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಲ್ಲ ಎಂದು ಕೇಳಿಬರುತ್ತಿವೆ.
ಮೃತ ಆಕಾಶರವರ ತಂದೆ ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಮೃತನಾಗಿದ್ದರು. ಅನುಕಂಪದ ಆಧಾರದ ಮೇಲೆ ಆಕಾಶಗೆ ಅವಕಾಶ ಕಲ್ಪಿಸಲಾಗಿತ್ತು, ಆಕಾಶ ಕುಲಕರ್ಣಿ ಒಂದು ವರ್ಷದ ಮಗುವಿದ್ದಾಗ ಅವರ ತಂದೆ ಅಕಾಲಿಕ ಮರಣ ಹೊಂದಿದ್ದರು. ೧೭ ವರ್ಷದ ನಂತರ ಆಕಾಶನನ್ನು ವಿದ್ಯುತ್ ಇಲಾಖೆಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು, ನಾಲ್ಕು ವರ್ಷದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ