Kannada NewsLatest

ಕೊರೋನಾ ಸೋಂಕು: ಬೆಳಗಾವಿಗೆ ದೊಡ್ಡ ಆಘಾತ; ಕೊರೋನಾ ದಂಧೆಯಾಯಿತೆ? ವಿಡಿಯೋ ನೋಡಿ

ಒಂದೇ ದಿನ 341 ಜನರಿಗೆ ಸೋಂಕು, ಐವರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದಲ್ಲಿ ಇಂದು ಮತ್ತೆ 5072 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ 2036 ಜನರಿಗೆ, ಬೆಳಗಾವಿಯಲ್ಲಿ 341 ಜನರಿಗೆ ಇಂದು ಸೋಂಕು ದೃಢಪಟ್ಟಿದೆ.

ಇಂದು ಒಟ್ಟೂ 72 ಜನರು ಸಾವಿಗೀಡಾಗಿದ್ದು, ಬೆಂಗಳೂರಿನಲ್ಲಿ 29 ಹಾಗೂ ಬೆಳಗಾವಿಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಲ್ಲಿ ತಲಾ 8 ಜನರು ಸಾವಿಗೀಡಾಗಿದ್ದಾರೆ.

ಬಳ್ಳಾರಿಯಲ್ಲಿ ಇಂದು 222, ದಕ್ಷಿಣ ಕನ್ನಡ 218, ಮೈಸೂರು 187, ಕಲಬುರಗಿ ಮತ್ತು ಧಾರವಾಡ 183, ಉಡುಪಿ 182, ವಿಜಯಪುರ 175, ಉತ್ತರ ಕನ್ನಡ 155, ಬೆಂಗಳೂರು ಗ್ರಾಮಾಂತರ 154,ಹಾಸನ 151, ಚಿಕ್ಕಬಳ್ಳಾಪುರ 101, ದಾವಣಗೆರೆ 79, ಯಾದಗಿರಿ, ರಾಯಚೂರು, ಕೋಲಾರ 68, ಬೀದರಿ 62, ಗದಗ 61, ಮಂಡ್ಯ 60, ಬಾಗಲಕೋಟೆ 57, ಹಾವೇರಿ 52, ಶಿವಮೊಗ್ಗ, ಚಿಕ್ಕಮಗಳೂರು 42, ಕೊಪ್ಪಳ 31, ತುಮಕೂರು 27, ಚಾಮರಾಜನಗರ 22, ರಾಮನಗರ 20, ಚಿತ್ರದುರ್ಗ 16, ಕೊಡಗು 9 ಜನರಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 90942 ಆಗಿದ್ದು, ಇನ್ನು ಕೆಲವೇ ದಿನದಲ್ಲಿ ಲಕ್ಷ ಮುಟ್ಟಲಿದೆ. ಮೃತರ ಸಂಖ್ಯೆ 1796 ಆಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ನೀಡಿದ ನಂತರ ರೋಗಿಗಳ ಸಂಖ್ಯೆ ಹೆಚ್ಚಾಗಿರುವ  ಸಂಶಯವಿದೆ. ಇದೊಂದು ಖಾಸಗಿ ಆಸ್ಪತ್ರೆಗಳಿಗೆ ಹಣ ಮಾಡುವ ದಂಧೆಯಾಗಲಿದೆಯೇ ಎನ್ನುವ ಆತಂಕವಿದೆ. ಇಂತಹ ಸಂಶಯ ಮೂಡಿಸುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಈ ಬಗ್ಗೆ ಮೂಗುದಾಣ ಹಾಕುವ ಕಾರ್ಯ ಸರಕಾರದಿಂದ ಆಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button