ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ತಡೆದ ಕಿತ್ತೂರಿನ ಬಜರಂಗದಳದ ಕಾರ್ಯಕರ್ತರು, ಪೊಲೀಸರ ವಶಕ್ಕೆ ನೀಡಿದ್ದಾರೆ.
ಶನಿವಾರ ರಾತ್ರಿ ಜೀವಂತ ಗೋವುಗಳನ್ನು ಕಟುಕರು ಲಾರಿಯಲ್ಲಿ ತುಂಬಿಕೊಂಡು ಸಾಗಿಸುವ ಸಮಯದಲ್ಲಿ, ವಿಶ್ವಹಿಂದೂ ಪರಿಷತ್ -ಬಜರಂಗದಳದ ಕಿತ್ತೂರು ತಾಲೂಕಾ ಕಾರ್ಯದರ್ಶಿ, ಶಿವಲಿಂಗಯ್ಯ ಪರಸನಟಿ , ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಗೋವುಗಳನ್ನು ಅತ್ಯಂತ ಅಮಾನವೀಯವಾಗಿ ವಾಹನದಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು.
ಎಲ್ಲಾ ಕಾರ್ಯಕರ್ತರು ಸೇರಿ ದಾರಿ ಮಧ್ಯದಲ್ಲಿ ವಾಹನವನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದರು. ಪೊಲೀಸರು ಕಟುಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಅಲ್ಲಿಂದ ಗೋವುಗಳನ್ನು ಸುರಕ್ಷಿತವಾಗಿ ಬಾಗೇವಾಡಿ ಹತ್ತಿರದ ಮಹಾವೀರ್ ಗೋಶಾಲೆಗೆ ತಲುಪಿಸಲಾಯಿತು.
ಈ ಭಾಗದಲ್ಲಿ ಗೋವು ಕಳ್ಳ ಸಾಗಣೆ ನಿರಂತರವಾಗಿ ನಡೆಯುತ್ತಿದ್ದು, ಕೆಲವು ತಿಂಗಳ ಹಿಂದೆ ಗೋವು ಕಳ್ಳ ಸಾಗಣೆ ತಡೆಯಲು ಮುಂದಾಗಿದ್ದ ಯುವಕನೋರ್ವ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ