ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ಹಿರಿಯ ಶಾಸಕ ಉಮೇಶ್ ಕತ್ತಿ ತಾವು ಸಚಿವರಾಗುವ ಕಾಲ ದೂರವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಉಮೇಶ್ ಕತ್ತಿ, ಮುಖ್ಯಮಂತ್ರಿಯವರಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಅಧಿಕಾರ ಇದೆ ಅವರೆ ಮಾಡುತ್ತಾರೆ. ಶಾಸಕ ತಿಪ್ಪಾರೆಡ್ಡಿ ಹಿರಿಯರು ನಾನು ಅವರು ಇಬ್ಬರು ಮಂತ್ರಿ ಆಗುವ ಕಾಲ ಬಹಳ ದೂರವಿಲ್ಲ. ನಾವು ಇಬ್ಬರು ಸಹ ಮಂತ್ರಿ ಆಗುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರನ್ನು ಶ್ಲಾಘಿಸಿರುವ ಕತ್ತಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಪ್ರವಾಹ ಬಂದಾಗ ರಾಜ್ಯವನ್ನ ಒಬ್ಬರೆ ಸುತ್ತಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಕೊರೊನಾ ಸಂದರ್ಭದಲ್ಲೂ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ ಮಾಡುವದನ್ನ ಬಿಟ್ಟು ಸಹಕಾರ ಕೊಡಬೇಕು. ಕೊರೊನಾ ಹಾಗೂ ಪ್ರವಾಹದಲ್ಲಿ ಒಳ್ಳೆ ಕೆಲಸ ಮಾಡಿದ ಯಡಿಯೂರಪ್ಪ ಒಬ್ಬ ಶ್ರಮ ಜೀವಿ ಎಲ್ಲರೂ ಅವರಿಗೆ ಸಹಕಾರ ಕೊಡಬೇಕು ಎಂದಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಿಗೆ ಸಮಾಧಾನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿಗಮ ಮಂಡಳಿಗಳನ್ನ ನೀಡಿದ್ದರು. ಹಲವರು ನಯವಾಗೆ ನಿರಾಕರಿಸಿದರೆ ಶಾಸಕ ತಿಪ್ಪಾರೆಡ್ಡಿ ಮಾತ್ರ ನನಗೆ ಅವಮಾನ ಮಾಡಲಾಗಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬಹಿರಂಗವಾಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈಗ ಉಮೇಶ್ ಕತ್ತಿ ಸಹ ನನಗೆ ಮಂತ್ರಿ ಸ್ಥಾನ ಬೇಕು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ