Latest

ಮದುವೆ ಮಾಡಿಕೊಂಡ ಮೇಲೆ ಗಂಡನ ಅಥವಾ ಹೆಂಡತಿಯ ಕಾಟ ಸಾಕಾಗಿದೆ ಅಂದ್ರೆ ಹೇಗೆ?

    ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಮದುವೆ ಮಾಡಿಕೊಂಡ ಮೇಲೆ ಗಂಡನ ಅಥವಾ ಹೆಂಡತಿಯ ಕಾಟ ಸಾಕಾಗಿದೆ ಅಂದ್ರೆ ಹೇಗೆ? ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. 
ಚಿಕ್ಕೋಡಿ ತಾಲೂಕಿನ ನಣದಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡುವುದಾಗಿ ಮಾತನಾಡಿದ್ದಾರೆ. ಮದುವೆ ಮಾಡಿಕೊಂಡ ಬಳಿಕ ನನ್ನ ಗಂಡನ ಅಥವಾ ಹೆಂಡತಿಯ ಕಾಟ ಸಾಕಾಗಿದೆ ಅಂದ್ರೆ ಹೇಗೆ? ಸಾಕಾಗಿದ್ದರೆ ರಾಜೀನಾಮೆ ಕೊಟ್ಟು ಹೊರಬರುವುದು ಉತ್ತಮ ಎಂದು ಅವರು ಹೇಳಿದರು. 
ಡೈವೋರ್ಸ್ ಆದ ಬಳಿಕವೇ ನಾವು ಏನು ಮಾಡಬೇಕೆಂದು ನಿರ್ಧರಿಸುತ್ತೇವೆ. ಸಧ್ಯ ಗಂಡ ಹೆಂಡತಿ ನಡುವೆ ಜಗಳವಿದೆ. ಡೈವೋರ್ಸ್ ಆಗಿ ಹೊರ ಬಂದ್ರೆ ಯೋಚಿಸಬಹುದು. ಮದುವೆಯಾಗುವುದಕ್ಕೆ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಇಷ್ಟ ಆಗಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಕಷ್ಟವನ್ನು ಇಂದು ಹೊರ ಹಾಕಿದ್ದಾರೆ ಎಂದು ಕೋರೆ ಹೇಳಿದರು.
ಕುಮಾರಸ್ವಾಮಿ ಸರ್ಕಾರದಲ್ಲಿ ರಾಜ್ಯದಲ್ಲಿ ಕೆಲಸಗಳೇ ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೂ ಅವರು ಆರೋಪಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button