ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್ ಮೀಡಿಯಾ ವಿಂಗ್
ರಕ್ಷಾಬಂಧನ ಒಂದು ಮಹಾನ ಆಧ್ಯಾತ್ಮೀಕ ರಹಸ್ಯದ ಹಬ್ಬವಾಗಿದೆ. ಕಲಿಯುಗದ ಅಂತಿಮ ಸಮಯದಲ್ಲಿ ಜಿವಾತ್ಮರೆಲ್ಲರೂ ತಮ್ಮ ನಿಜಸ್ವರೂಪವನ್ನು ಮರೆತು ದೆಹಾಭಿಮಾನಿಗಳಾಗಿ ಪಂಚ ವಿಕಾರಗಳಿಗೆ ವಶರಾದಾಗ ದು:ಖ, ಅಶಾಂತಿ, ಕಷ್ಟ-ಚಿಂತೆಗಳ, ರೊಗ-ಶೋಕಗಳ ಬಂಧನಕ್ಕೆ ಒಳಗಾಗುತ್ತಾರೆ. ಅಂದರೆ ಪ್ರತಿಯೊಬ್ಬ ಮಾನವ ಜೀವನಬಂಧನದಲ್ಲಿ ಕರ್ಮಬಂಧನದಲ್ಲಿ ಸಿಲುಕುತ್ತಾನೆ. ಅಂತಹಸಮಯದಲ್ಲಿ ಸರ್ವರ ಮುಕ್ತದಾತ,ಪತಿತಪಾವನ ಜ್ಞಾನಸಾಗರ, ಪರಮಾತ್ಮನೇ ಸ್ವತ: ಅವತರಿಸಿ, ಅಜ್ಞಾನದಲ್ಲಿರುವ ಜೀವಾತ್ಮರಿಗೆ ಆತ್ಮಜ್ಞಾನ ನೀಡಿ ಮತ್ತು ತನ್ನ ಯಥಾರ್ಥ ಪರಿಚಯವನ್ನು ಮಾಡಿಸಿ ಆತ್ಮ(iಕ್ಕಳು) ಮತ್ತು ಪರಮಾತ್ಮನ(ಸರ್ವ ಆತ್ಮರ ತಂದೆಯ) ಸ್ನೇಹದ ಸಂಬಂಧವನ್ನು ಜೋಡಿಸುವ ವಿಧಾನ ಅಂದರೆ ರಾಜಯೋಗ ಕಲಿಸಿ ಸರ್ವ ಆತ್ಮರನ್ನು ಎಲ್ಲಾ ಬಂಧನಗಳಿಂದ, ಪಾಪಗಳಿಂದ ಮುಕ್ತಮಾಡಿ, ಸುಖ, ಶಾಂತಿ, ಆನಚಿದ, ಸೌಭಾಗ್ಯದ ರಕ್ಷಣೆ ನೀಡುತ್ತಾನೆ, ಇದೆ ನಿಜವಾದ ರಕ್ಷಾಬಂಧನ.
ಆದರೆ ಇಂದು ನಾವು ಆಚರಿಸುವ ರಕ್ಷಾಬಂಧನ ಕೇವಲ ಒಂದು ಮೂಢ ಪರಂಪರೆಯಾಗಿ ನಡೆದು ಬಂದಿದೆ. ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಮಸ್ತಕದಲ್ಲಿ ತಿಲಕವನ್ನಿಟ್ಟು ಬಾಯಿಯನ್ನು ಸಿಹಿ ಮಾಡುತ್ತಾಳೆ. ಇದರ ಪ್ರತಿಯಾಗಿ ಸಹೋದರನು ಕಾಣಿಕೆಯನ್ನು ಕೊಡುತ್ತಾನೆ.
ಇದರ ಸತ್ಯಾರ್ಥವೇನೆಂದರೆ ನಾವೆಲ್ಲರೂ ಆತ್ಮಗಳ ತಂದೆಯಾದ ಒಬ್ಬ ಪರಮಾತ್ಮನ ಮಕ್ಕಳಾಗಿರುವುದರಿಂದ ಆತ್ಮಿಕ ದೃಷ್ಟಿಯಲ್ಲಿ ಸಹೋದರ ಸಹೋದರಿಯರಾಗಿದ್ದೇವೆ. ಈ ರಾಖಿಯು ಸಹೋದರ-ಸಹೋದರಿಯರ ಪವಿತ್ರ ಸ್ನೇಹದ ಸೂಚಕವಾಗಿದೆ.
ಮಸ್ತಕದಲ್ಲಿ ಇಡುವ ತಿಲಕ ಆತ್ಮಜ್ಞಾನದ ಪ್ರತಿಕವಾಗಿದೆ. ಬಾಯಿ ಸಿಹಿ ಮಾಡುವುದೆಂದರೆ ಶುಭ ಹಾಗೂ ಮಧುರವಾದ ನುಡಿಗಳನ್ನು ನುಡಿಯಬೇಕೆಂಬ ಅರ್ಥವಾಗಿದೆ. ರಾಖಿಯಲ್ಲಿರುವ ಹೂವು ನಮ್ಮೆಲ್ಲರ ಜೀವನ ದಿವ್ಯಗುಣಗಳ ಸುಗಂಧ ನೀಡಬೇಕೆಂಬ ಅರ್ಥ ಸೂಚಿಸುತ್ತದೆ. ರಾಖಿಯಲ್ಲಿರುವ ಎರಡು ದಾರಗಳು ನಿಯಮ ಮತ್ತು ಸಂಯಮದ ದ್ಯೋತಕವಾಗಿದೆ.
ಇದಕ್ಕೆ ಪ್ರತಿಯಾಗಿ ಸಹೋದರರು ತಮ್ಮಲ್ಲಿ ಇರುವ ದುರ್ಗುಣಗಳು, ದುಶ್ಚಟಗಳನ್ನು, ದುರ್ಬಲತೆಗಳನ್ನು ಕಾಣಿಕೆಯಾಗಿ ಕೊಡಬೇಕು. ವಿನಹ ಸ್ಥೂಲ ಹಣ ಅಥವಾ ಕಾಣಿಕೆ ಕೊಡಬೇಕೆಂಬ ಅರ್ಥವಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ