ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಂಬು ಗರ್ಭಿಣಿಯರಲ್ಲಿ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಸುಮಾರು 200 ಗರ್ಭಿಣಿಯರು ಮಹಾಮಾರಿ ಕೊರೊನಾವನ್ನು ಗೆದ್ದಿದ್ದಾರೆ.
ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬಿದ ಆತಂಕದ ಬೆನ್ನಲ್ಲೇ ಗರ್ಭಿಣಿಯರಲ್ಲಿ ಕೊರೊನಾಂತಕ ಉಂಟಾಗಿದೆ. ಆದರೆ ವಾಣಿವಿಲಾಸ ಆಸ್ಪತ್ರೆ ಇದೂವರೆಗೂ ಸುಮಾರು 200 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಯಶಸ್ವಿಯಾಗಿದೆ.
ಸರ್ಕಾರಿ ವಾಣಿವಿಲಾಸ ಆಸ್ಪತ್ರೆಯೊಂದರಲ್ಲಿಯೇ 200 ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದ್ದು, ಇಷ್ಟು ಮಂದಿ ಕೊರೊನಾ ಸೋಂಕಿತರಿಗೆ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದ ವೈದ್ಯರು, 200ನೇ ಡೆಲಿವರಿ ಸಕ್ಸಸ್ ಆದ ವೇಳೆ ಸಿಬ್ಬಂದಿಯೊಂದಿಗೆ ಆಸ್ಪತ್ರೆಯ ಅವರಣದಲ್ಲಿ ಕಂದಮ್ಮನನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ನರ್ಸ್ ಸೇರಿದಂತೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ 200ನೇ ಮುದ್ದು ಕಂದಮ್ಮನನ್ನು ಎತ್ತಿಕೊಂಡು ಖುಷಿಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ