ನಿರಾಣಿ ಸೂಪರ್ ಮಾರ್ಕೆಟ್ ಉದ್ಘಾಟನೆ

ಮುರುಗೇಶ ನಿರಾಣಿ ಹುಟ್ಟು ಹಬ್ಬ

ಪ್ರಗತಿವಾಹಿನಿ ಸುದ್ದಿ,  ಮುಧೋಳ :  ರೈತರು ಮತ್ತು ಸೈನಿಕರು ದೇಶ ರಕ್ಷಣೆಯ ಬೆನ್ನೆಲಬು ಆಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಬಹಳ ಅನರ್ಘ್ಯವಾದದ್ದು ಎಂದು ನಿವೃತ್ತ ಉಪಮಹಾದಂಡನಾಯಕ ರಮೇಶ ಹಲಗಲಿ ಹೇಳಿದರು.
ಶಾಸಕ ಹಾಗೂ ಖ್ಯಾತ ಸಕ್ಕರೆ ಉದ್ಯಮಿ ಮುರುಗೇಶ ನಿರಾಣಿ ಅವರ ೫೫ ನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಧೋಳದ ನಿರಾಣಿ ಉದ್ಯಮ ಸಮೂಹ ಹಮ್ಮಿಕೊಂಡಿದ್ದ ಸೂಪರ್ ಮಾರ್ಕೆಟ್, ಅಗ್ರಿಮಾರ್ಟ್ ಹಾಗೂ ಆರೋಗ್ಯ ಬಂಧು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಹಲಗಲಿ ಅವರು ಮಾತನಾಡಿದರು.
ರೈತರ ಹಿತಕಾಪಾಡುವುದು, ಕಷ್ಟದಲ್ಲಿ ಅವರಿಗೆ ನೆರವಾಗುವುದು, ದೇಶ ಸೇವೆಯೇ ಒಂದು ಭಾಗವಾಗಿದೆ. ರೈತ ನೆಮ್ಮದಿಯಿಂದ ಬಾಳುವಂತೆ ಎಲ್ಲರೂ ಬೆಂಬಲ ನೀಡಬೇಕು. ಮುರುಗೇಶ ನಿರಾಣಿ ಅವರ ನೇತೃತ್ವದ ನಿರಾಣಿ ಉದ್ಯಮ ಸಮೂಹ ರೈತರ ಅನುಕೂಲಕ್ಕಾಗಿ ಸೂಪರ್ ಮಾರ್ಕೆಟ್, ಅಗ್ರಿಮಾರ್ಟ್ ಆರಂಭಿಸಿರುವುದು ಮತ್ತು ಅವರಿಗೆ ಆರೋಗ್ಯ ಬಂಧು ಹೆಲ್ತ್‌ಕಾರ್ಡ ವಿತರಿಸುವುದು ನಮಗೆ ಬಹಳ ಸಂತೋಷವನ್ನುಂಟು ಮಾಡಿದೆ. ಇದು ದೇಶ ಮೆಚ್ಚುವ ಕೆಲಸವಾಗಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹಲಗಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಅವರು, ನಿರಾಣಿ ಕಾರ್ಖಾನೆಯ ಆವರಣದಲ್ಲಿ ಸೂಪರ್ ಮಾರ್ಕೆಟ್, ಅಗ್ರಿಮಾರ್ಟ್ ಸಿದ್ಧವಾಗಿವೆ.  ರಮೇಶ ಹಲಗಲಿ ಅವರ ಮಾರ್ಗದರ್ಶನವನ್ನು ಪಡೆಯಲಾಗಿದೆ. ಇಲ್ಲಿ ದಿನಬಳಕೆಯ ವಸ್ತುಗಳು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳು ಒಂದೇ ಸೂರಿನಡಿಯಲ್ಲಿ ಲಭಿಸುತ್ತವೆ. ರೈತ ಕುಟುಂಬಗಳ ಆರೋಗ್ಯ ದೃಷ್ಟಿಯಿಂದ ಬಾಗಲಕೋಟ, ವಿಜಯಪುರ, ಬೆಳಗಾವಿ ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಸುಮಾರು ೧೦೦ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ೩ ಲಕ್ಷ ರೂ ವರೆಗೆ ಅಪಘಾತ ವಿಮೆ ದೊರಕುವುದು, ರೈತನ ಪತ್ನಿ ಮತ್ತು ಇಬ್ಬರು ಅವಲಂಬಿತ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ಸಂಗಮೇಶ ನಿರಾಣಿ ಹೇಳಿದರು.
ಡಾ. ಎ.ಆರ್ ಬೆಳಗಲಿ, ಹೆಲ್ತ್‌ಕಾರ್ಡ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಭುದೇವರು ಹೊರಗಿನಮಠ, ಸಹಜಾನಂದ ಸ್ವಾಮಿಜೀ, ಡಾ. ಶರಣ ಈಶ್ವರ ಮಂಟೂರ, ಸದಾಶಿವ ಗುರುಜೀ, ಬೆಂಗೇರಿ ಗುರುಜೀ, ಗಿರಿಮಲ್ಲಯ್ಯ ಗಣಾಚಾರಿ, ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ ಸದಸ್ಯ ರಾಜು ನಂದೆಪ್ಪನ್ನವರ, ಮಲ್ಲಪ್ಪ ಪೂಜಾರಿ, ಡಾ. ವಿನೊದ ಮೇತ್ರಿ, ಪಿ.ಎನ್ ಪಾಟೀಲ, ಕಾಡು ಮಾಳಿ, ಎಸ್.ಎಂ ಜತ್ತಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಮನಗೌಡ ನಾಡಗೌಡ ಮತ್ತು ವೆಂಕಟೇಶ ಜಂಬಗಿ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button