ಶ್ಯಾಮ ಹಂದೆ, ಮುಂಬೈ – ಮಹಾರಾಷ್ಟ್ರ ರಾಜ್ಯದ ಮಹಾವಿಕಾಸ್ ಆಘಾಡಿ ಸರ್ಕಾರದಲ್ಲಿ ಮುಖ್ಯಮಂತ್ರಿ ಶಿವಸೇನಾ ಪಕ್ಷದವರಾಗಿದ್ದರೂ, ರಾಜ್ಯದಲ್ಲಿ ವಿಶೇಷ ಪ್ರಭಾವ ಬೀರಲು ಇನ್ನೂ ಸಾಧ್ಯವಾಗಿಲ್ಲ. ಸಮರ್ಪಕವಾಗಿ ಕೆಲಸವಾಗುತ್ತಿಲ್ಲವೆಂದು ಶಾಸಕರ ಅಳಲು ಬೇರೆ. ಆಡಳಿತದ ಹಿಡಿತ ಇರಿಸಿರುವವರಲ್ಲಿ ಅಜೋಯ್ ಮೆಹ್ತಾ ಮತ್ತು ಶರದ್ ಪವಾರ್ ಅವರದ್ದೇ ‘ಕಂಟ್ರೋಲ್’.
ಈ ನಡುವೆ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಪಕ್ಷದ ನಾಯಕ ಮತ್ತು ಉದ್ಧವ್ ಅವರ ಪುತ್ರ, ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆಯವರ ಹೆಸರಿನ ಚರ್ಚೆ, ಮತ್ತು ಸಿಬಿಐಗೆ ಹಸ್ತಾಂತರಿಸಲಾದ ಪ್ರಕರಣ ಇನ್ನಷ್ಟು ಕಠಿಣ ಪರಿಸ್ಥಿತಿ ತಂದೊಡ್ಡಿದೆ. ಇದರಿಂದ ಶಿವಸೇನೆ ಪಕ್ಷವು ಸದ್ಯ ಹತಾಶೆಯ ಸ್ಥಿತಿಯಲ್ಲಿದೆ.
ಅಂದು ರಾಜ್ ಠಾಕ್ರೆ ವಿಪತ್ತನ್ನು ನಿವಾರಿಸಿದ ಬಾಳಾಸಾಹೇಬ್!
ಶಿವಸೇನೆ – ಬಿಜೆಪಿ ಮೈತ್ರಿಕೂಟ 1995 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿತು. ಖುಷಿಯಲ್ಲಿರುವಾಗಲೇ, ಮಾಟುಂಗಾ ನಿವಾಸಿ ರಮೇಶ್ ಕಿಣಿಯವರ ಕೊಲೆ ಪ್ರಕರಣದಲ್ಲಿ ರಾಜ್ ಠಾಕ್ರೆ ಅವರ ಹೆಸರು ಚರ್ಚೆಗೆ ಬಂದದ್ದರಿಂದ ರಾಜಕೀಯ ಮತ್ತು ಸಾಮಾಜಿಕವಾಗಿ ರಾಜ್ ಠಾಕ್ರೆ ದೊಡ್ಡ ನಷ್ಟವನ್ನು ಅನುಭವಿಸಿದರು. ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ, ಅಮಿತಾಬ್ ಬಚ್ಚನ್ ಮತ್ತು ಅಮರ್ ಸಿಂಗ್ ಅವರೊಂದಿಗಿರುವ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಸಖ್ಯ ರಾಜ್ ಅವರ ಬೆಂಬಲಕ್ಕೆ ನಿಂತ ಪರಿಣಾಮ ರಾಜ್ ಆವಾಗ ದೊಡ್ಡ ವಿಪತ್ತಿನಿಂದ ಪಾರಾಗಿದ್ದರು.
ಇದಕೆಲ್ಲ ಕಾರಣ ಸಂಗಾತಿ ದೋಷ.
ಚಲನಚಿತ್ರ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸದಿದ್ದ ನಟರೊಂದಿಗೆ ರಾಜ್ ಠಾಕ್ರೆ ಅವರಿಗಿರುವ ಸ್ನೇಹ ಮತ್ತು ಕೆಲವು ಸ್ವಾರ್ಥಿ ಸ್ನೇಹಿತರು ಇದಕ್ಕೆಲ್ಲ ಕಾರಣಕರ್ತರಾಗಿದ್ದರು. ಈ ಇಡೀ ಪ್ರಕರಣದಲ್ಲಿ ರಾಜ್ ಠಾಕ್ರೆ ಭಾರೀ ಆಘಾತಕ್ಕೊಳಗಾಗಿದ್ದರು.
ಬಿಸಿ-ಬಿಸಿ ಸುದ್ದಿ
ಆ ಕಾಲದಲ್ಲಿ, ರಮೇಶ್ ಕಿಣಿ ಪ್ರಕರಣದ ಹಲವು ಸುದ್ದಿಗಳು ದೈನಿಕಗಳಲ್ಲಿ ಬಿಸಿ-ಬಿಸಿ ತುಪ್ಪದಂತೆ ನಿತ್ಯ ಪ್ರಕಟವಾಗುತಿತ್ತು. ಅದರಲ್ಲೂ ಪತ್ರಕರ್ತ ನಿಖಿಲ್ ವಾಗ್ಲೆ ಶಿವಸೇನೆ ಮತ್ತು ಬಾಳಾಸಾಹೇಬರ ಬೆನ್ನು ಬಿದ್ದಿದ್ದರು. ಪರಿಣಾಮ, ರಾಜ್ ಸುತ್ತಮುತ್ತಲಿರುವ ಸ್ನೇಹಿತರ ವಲಯವು ಇದ್ದಕ್ಕಿದ್ದಂತೆ ಚದುರಿಹೋಗಿತ್ತು. ಈ ಇಡೀ ಪ್ರಕರಣವನ್ನು ಅಂದಿನ ಪ್ರತಿಪಕ್ಷದ ನಾಯಕ ಛಗನ್ ಭುಜ್ ಬಲ್ ಎತ್ತಿ ಹಿಡಿದಿದ್ದರು. ಕಾಲಾಂತರದ ನಂತರ ಈ ಪ್ರಕರಣದಲ್ಲಿ ರಾಜ್ ಭಾಗಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಆದರೆ ಅಷ್ಟೊತ್ತಿಗೆ ರಾಜ್ ಠಾಕ್ರೆ ಮತ್ತು ಅಧಿಕಾರದಲ್ಲಿದ್ದ ಶಿವಸೇನೆಗೆ ದೊಡ್ಡ ಮೊತ್ತ ತೆರಬೇಕಾಯಿತು.
ಇತಿಹಾಸದ ಪುನರಾವೃತಿಯಾಗಬಹುದೇ?
ಪ್ರಸ್ತುತ ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿಸಲಾಗುತ್ತಿದೆ. ಆದಿತ್ಯ ಠಾಕ್ರೆ ತನ್ನ ತಂದೆಯಂತೆ ಶಾಂತ ಸ್ವಭಾವಕ್ಕೆ ಪ್ರಸಿದ್ದ. ಆದರೆ ಕಾಲೇಜು ಜೀವನದಲ್ಲಿ, ಹೈಪ್ರೋಫೈಲ್ ಗೆಳೆಯರಿಂದಾಗಿ ಚಲನಚಿತ್ರೋದ್ಯಮ ಕ್ಷೇತ್ರದಲ್ಲಿಯ ಸ್ನೇಹಿತರೊಂದಿಗೆ ಅವರ ಸಂಪರ್ಕ ಬೆಳೆಯಿತು. ಪರಿಣಾಮ, ಬೆಳ್ಳಿ ಪರದೆಯಲ್ಲಿ ಅಷ್ಟೇನು ಛಾಪು ಮೂಡಿಸದ, ಗಟ್ಟಿತಳವೂರದ ನಟ-ನಟಿಯರು ಆದಿತ್ಯ ಅವರ ಸುತ್ತ ಸೇರಿ ತಮ್ಮ ಸ್ವಾರ್ಥ ಸಾಧಿಸಲಾರಂಭಿಸಿದರು. ಅದಕ್ಕಾಗಿಯೇ ಟೆರೇಸ್ಗಳಲ್ಲಿ ರೆಸ್ಟೋರೆಂಟ್, ಮುಂಬಯಿಯಲ್ಲಿ ನೈಟ್ ಲೈಫ್ ಅಧಿಕೃತಗೊಳಿಸಲು ಆದಿತ್ಯ ಠಾಕ್ರೆ ತಮ್ಮ ರಾಜಕೀಯ ತೂಕವನ್ನು ಬಳಸಿದರು.
ಕಿಡಿ ಗೀರಿದ ಬಿಜೆಪಿ ಶಾಸಕ
ಮೊದಲನೆಯದಾಗಿ, ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್ ಆದಿತ್ಯ ವಿರುದ್ಧ ಪತ್ರವೊಂದನ್ನು ತೆಗೆದು ಸುಶಾಂತ್ ಸಿಂಗ್ ಪ್ರಕರಣಕ್ಕೆ ಕಿಡಿ ಗೀರಿದರು. ಆದರೆ, ಶಿವಸೇನೆಯಲ್ಲಿ ವಿಶೇಷವಾಗಿ ಟೀಮ್ ಆದಿತ್ಯ, ಎಂದು ಗುರುತಿಸಲ್ಪಡುವ ಯಾರೊಬ್ಬರೂ ಪ್ರತಿಕ್ರಿಯೆ ಬಿಡಿ, ಯುವಸೇನ ಮುಖ್ಯಸ್ಥನಿಗೆ ಮಾನಸಿಕ ಬೆಂಬಲ ನೀಡಲೂ ಮುಂದಾಗಲಿಲ್ಲ. ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಸಂಸದ ಸಂಜಯ್ ರಾವುತ್ ಇದಕ್ಕೆ ಅಪವಾದ. ಕಾಂಗ್ರೆಸ್ ನಿಂದ ಬಂದು ಬಿಜೆಪಿ ನಾಯಕರಾದ ಸಂಸದ ನಾರಾಯಣ್ ರಾಣೆ ಸಿಬಿಐ ತನಿಖೆಗೆ ಒತ್ತಾಯಿಸಿದ ನಂತರ ಅದನ್ನು ಅಂಗೀಕರಿಸಲಾಯಿತು. ಇದರ ಪರಿಣಾಮವಾಗಿ, ಮುಂಬೈ ಪೊಲೀಸರ ನೈತಿಕ ಬಲ ಕುಸಿತ ಮತ್ತು ಶಿವಸೇನೆ ಮೇಲೆ ಒತ್ತಡ ಬಂದು ಠಾಕ್ರೆಯವರ ಸಮಸ್ಯೆಗಳು ಈ ದಿನಗಳಲ್ಲಿ ಹೆಚ್ಚಿವೆ.
ಖರ್ಚಿಗೆ ಹಣವಿಲ್ಲ, ಕೈಯಲ್ಲಿ ಅಧಿಕಾರವಿಲ್ಲ– ಕೊರೋನಾದಿಂದ ಕಳೆದ ಐದು ತಿಂಗಳಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತೋಶ್ರೀಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ನಲ್ಲಿ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಕೋವಿಡ್ ವಿರುದ್ಧದ ಹೋರಾಟಕ್ಕೆ ಸರ್ಕಾರ ತನ್ನ ಎಲ್ಲಾ ಬೊಕ್ಕಸವನ್ನು ಬಳಸುತ್ತಿದೆ. ಸಂಸದ ನಿಧಿ ಕೂಡ ಪ್ರಧಾನಿ ಮೋದಿ ಕೋವಿಡ್ ಗಾಗಿ ಪರಿವರ್ತಿಸಿದ್ದರಿಂದ ಇಲಾಖೆಯ ಕೆಲಸವೂ ಸ್ಥಗಿತಗೊಂಡಿದೆ. ಶಾಸಕರಿಗೆ ವರ್ಗಾವಣೆಯಲ್ಲಿ ‘ಆಸಕ್ತಿ’.
ಅದನ್ನು ಸಹ ಅಜೋಯ್ ಮೆಹ್ತಾ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮೂಲಕ ಮಾಡಲಾಗುತ್ತಿದ್ದರಿಂದ ಶಾಸಕರ ಪಾಲಿಗೆ ಅಲ್ಲೂ ನಿರಾಸೆ ಮೂಡಿದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ನಿಮ್ಮನ್ನು ಶಾಸಕರನ್ನಾಗಿ ಮಾಡಿ ಏನು ಪ್ರಯೋಜನ? ಎಂದು ಪ್ರಶ್ನೆಯನ್ನು ಶಾಸಕರಿಗೆ ಕ್ಷೇತ್ರದ ಜನರಿಂದ ಕೇಳಲಾಗುತ್ತಿದೆ.
ವಲಸೆ ಬಂದವರಿಗೆ ಮಣೆ- ಎಂಟು ತಿಂಗಳು ಕಳೆದರೂ, ನಿಗಮ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ನಡೆದಿಲ್ಲ. ಬೆರಳೆಣಿಕೆಯಷ್ಟು ನಡೆದ ನೇಮಕಾತಿಗಳಲ್ಲಿ ಹಕ್ಕಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುನಿಲ್ ಶಿಂಧೆ, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ ಸಾವಂತ್ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾಗ ಸೇನಾ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ರವೀಂದ್ರ ವೈಕರ್ ಅವರನ್ನು ಕೈಬಿಡಲಾಗದಂತಹ ಪರಿಸ್ಥಿತಿ ಇದೆ. ದೆಹಲಿ ಸಹಿತ ದೇಶಾದ್ಯಂತ ಪ್ರವಾಸ ಮಾಡಿ ಬಂದ ಪ್ರಿಯಾಂಕಾ ಚತುರ್ವೇದಿ ಅವರಿಗೆ ಆದಿತ್ಯ ಠಾಕ್ರೆ ನೇರ ಸಂಸದ ಪಟ್ಟವನ್ನೇ ನೀಡಿದ್ದರಿಂದ ಪಕ್ಷಕ್ಕಾಗಿ ಪರಿಶ್ರಮ ಪಟ್ಟವರಿಗೆ ಬೆಲೆ ಇಲ್ಲದಂತಾಗಿದೆ.
ಗ್ರಾಮೀಣ ಪ್ರದೇಶದ ಜನರ ಪ್ರತಿನಿಧಿಗಳ ಪರಿಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಸರ್ಕಾರದಲ್ಲಿಯ ನಾಲ್ವರು ಶಾಸಕರು ಕಳೆದ ಚುನಾವಣೆಗೆ ಜಮೀನು ಮತ್ತು ಬಂಗ್ಲೆ ಅಡವಿಟ್ಟು ಸಾಲ ಪಡೆದಿದ್ದರು. ಒಂದು ವರ್ಷದೊಳಗೆ ಸಾಲ ಮರುಪಾವತಿಸದಿದ್ದರೆ, ಅದಕ್ಕೆ ತುಳಸಿನೀರು ಬಿಡಬೇಕಾಗುತ್ತದೆ. ಇಂತಹ ಆರ್ಥಿಕ ಅಡಚಣೆಗಳಲ್ಲಿ ಸಿಲುಕಿರುವ ಶಾಸಕರನ್ನು ಬಿಜೆಪಿ ಗಾಳಕ್ಕೆ ಸಿಕ್ಕಿಸಬಹುದಾದ ಪರಿಸ್ಥಿತಿಯೂ ಇದೆ.
ಸಬ್ ಕುಚ್ ಆದಿತ್ಯ-
ಆದಿತ್ಯ ಠಾಕ್ರೆ ಅವರ ಮೊಂಡುತನದಿಂದಾಗಿ, ಪಕ್ಷ ಸರ್ವತೋಮುಖ ರಾಜಕೀಯದಲ್ಲಿ ತೊಡಗದೆ ‘ಟೀಮ್ ಆದಿತ್ಯ’ದತ್ತ ಒತ್ತು ನೀಡಲಾಗುತ್ತಿದೆ. ಅವರಲ್ಲಿ ಕಾರ್ಯಕ್ಷಮತೆ ಇಲ್ಲದಿದ್ದರೂ, ಅವರು ‘ಟೀಮ್ ಆದಿತ್ಯ’ದ ಸದಸ್ಯರಾಗಿದ್ದಾರೆ ಎಂದು ಅವರನ್ನು ಉತ್ತೇಜಿಸಲಾಗುತ್ತಿರುವುದರಿಂದ ಪಕ್ಷದಲ್ಲಿ ದೊಡ್ಡ ಹತಾಶೆ ಇದೆ.
ರಾಜ್ ಈಗ ಆದಿತ್ಯ ಠಾಕ್ರೆ ಅವರ ಸಹಾಯಕ್ಕೆ ಬರುತ್ತಾರೆಯೇ?
ಚಿತ್ರ ಜಗತ್ತಿನಲ್ಲಿ ರಾಜ್ ಠಾಕ್ರೆ ಅವರ ಇನ್ನೂ ಪ್ರಾಬಲ್ಯ ಇದೆ. ಶಾರುಖ್ ಖಾನ್ ಆಗಿರಲಿ ಅಥವಾ ಕರಣ್ ಜೋಹರ್ , ರಾಜ್ ಅವರ ಧ್ವನಿ ಕೇಳುತ್ತಲೇ ಕೃಷ್ಣಕುಂಜ್ ಗೆ ಓಡಿ ಬರುತ್ತಾರೆ. ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೂ ರಾಜ್ ಅವರ ವೈಯಕ್ತಿಕ ಸ್ನೇಹವಿದೆ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮುಂದೆ ಅನೇಕ ಹಿರಿಯ ನಟರು ಮತ್ತು ನಿರ್ಮಾಪಕರು ಮಂಡಿಯೂರಿ ಬರುತ್ತಿದ್ದರು. ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಕ್ಷೇತ್ರದ ಅವಕಾಶವಾದಿಗಳಿಂದ ದೂರವಿದ್ದಾರೆ. ಈಗ, ಆದಿತ್ಯ ಠಾಕ್ರೆ ಸಹಾಯಕ್ಕೆ ಚಿತ್ರರಂಗದ ಮೇಲೆ ಪ್ರಭಾವವಿರುವ ಚಿಕ್ಕಪ್ಪ ರಾಜ್ ಠಾಕ್ರೆ ಬರುತ್ತಾರೆಯೇ ಅಥವಾ ಸಿಬಿಐಯನ್ನು ಮುಷ್ಠಿಯಲ್ಲಿ ಹಿಡಿದಿರುವ ಗೃಹ ಸಚಿವ ಅಮಿತ್ ಷಾ ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇತಿಹಾಸದ ಪುನರಾವೃತಿಯಾಗಬಹುದೇ?-
ಇತಿಹಾಸವು ಪುನರಾವರ್ತನೆಯಾಗುತ್ತಿರುವುದು ಒಂದು ವಿಚಿತ್ರ ಕಾಕತಾಳೀಯ. ಆದರೆ ಆಗ ನಡೆದದ್ದು ಇಂದಿಗೂ ನಡೆಯುತ್ತಿದೆ. ರಮೇಶ್ ಕಿಣಿ ಅವರದು ಆತ್ಮಹತ್ಯೆಯೋ ಕೊಲೆಯೋ ಎಂಬ ಚರ್ಚೆಯ ಪ್ರಕರಣ ಘಟಿಸಿದ ನಂತರ ಪತ್ರಕರ್ತ ನಿಖಿಲ್ ವಾಗ್ಲೆ ಕಿಣಿ ಪ್ರಕರಣವನ್ನು ಎತ್ತಿ ಹಿಡಿದರು. ಈ ಪ್ರಕರಣದಲ್ಲಿ ಅವರು ನೇರವಾಗಿ ಬಾಳಾಸಾಹೇಬರನ್ನೇ ಟೀಕಿಸುತ್ತಿದ್ದರು. ಅದೇ ರೀತಿಯ ದೃಶ್ಯಇಂದು ಪುನಃ ನಡೆಯುತ್ತಿದೆ. ಪ್ರಸ್ತುತ ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣದಲ್ಲೂ ಅನುಮಾನದ ಹುತ್ತ ಮಾತೋಶ್ರೀಯ ಸುತ್ತಲೇ ಬೆಳೆಯಲಾರಂಭಿಸಿದೆ. ಈ ಬಾರಿ ಅರ್ನಾಬ್ ಗೋಸ್ವಾಮಿ ಮತ್ತು ಅವರ ರಿಪಬ್ಲಿಕ್ ಇಂಡಿಯಾ ಚಾನೆಲ್ ಶಿವಸೇನ ಪಕ್ಷ ಮತ್ತು ಶಿವಸೇನೆ ಮುಖ್ಯಸ್ಥರನ್ನೇ ಗುರಿಯಾಗಿಸುತ್ತಿರುವುದು ವಿಶೇಷ ಎನ್ನಬಹುದಾಗಿದೆ.
ಇದಕೆಲ್ಲ ಕಾರಣ ಸಂಗಾತಿ ದೋಷ.
ಚಲನಚಿತ್ರ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸದಿದ್ದ ನಟರೊಂದಿಗೆ ರಾಜ್ ಠಾಕ್ರೆ ಅವರಿಗಿರುವ ಸ್ನೇಹ ಮತ್ತು ಕೆಲವು ಸ್ವಾರ್ಥಿ ಸ್ನೇಹಿತರು ಇದಕ್ಕೆಲ್ಲ ಕಾರಣಕರ್ತರಾಗಿದ್ದರು. ಈ ಇಡೀ ಪ್ರಕರಣದಲ್ಲಿ ರಾಜ್ ಠಾಕ್ರೆ ಭಾರೀ ಆಘಾತಕ್ಕೊಳಗಾಗಿದ್ದರು.
ಬಿಸಿ-ಬಿಸಿ ಸುದ್ದಿ
ಆ ಕಾಲದಲ್ಲಿ, ರಮೇಶ್ ಕಿಣಿ ಪ್ರಕರಣದ ಹಲವು ಸುದ್ದಿಗಳು ದೈನಿಕಗಳಲ್ಲಿ ಬಿಸಿ-ಬಿಸಿ ತುಪ್ಪದಂತೆ ನಿತ್ಯ ಪ್ರಕಟವಾಗುತಿತ್ತು. ಅದರಲ್ಲೂ ಪತ್ರಕರ್ತ ನಿಖಿಲ್ ವಾಗ್ಲೆ ಶಿವಸೇನೆ ಮತ್ತು ಬಾಳಾಸಾಹೇಬರ ಬೆನ್ನು ಬಿದ್ದಿದ್ದರು. ಪರಿಣಾಮ, ರಾಜ್ ಸುತ್ತಮುತ್ತಲಿರುವ ಸ್ನೇಹಿತರ ವಲಯವು ಇದ್ದಕ್ಕಿದ್ದಂತೆ ಚದುರಿಹೋಗಿತ್ತು. ಈ ಇಡೀ ಪ್ರಕರಣವನ್ನು ಅಂದಿನ ಪ್ರತಿಪಕ್ಷದ ನಾಯಕ ಛಗನ್ ಭುಜ್ ಬಲ್ ಎತ್ತಿ ಹಿಡಿದಿದ್ದರು. ಕಾಲಾಂತರದ ನಂತರ ಈ ಪ್ರಕರಣದಲ್ಲಿ ರಾಜ್ ಭಾಗಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಆದರೆ ಅಷ್ಟೊತ್ತಿಗೆ ರಾಜ್ ಠಾಕ್ರೆ ಮತ್ತು ಅಧಿಕಾರದಲ್ಲಿದ್ದ ಶಿವಸೇನೆಗೆ ದೊಡ್ಡ ಮೊತ್ತ ತೆರಬೇಕಾಯಿತು.
ಇತಿಹಾಸದ ಪುನರಾವೃತಿಯಾಗಬಹುದೇ?
ಪ್ರಸ್ತುತ ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿಸಲಾಗುತ್ತಿದೆ. ಆದಿತ್ಯ ಠಾಕ್ರೆ ತನ್ನ ತಂದೆಯಂತೆ ಶಾಂತ ಸ್ವಭಾವಕ್ಕೆ ಪ್ರಸಿದ್ದ. ಆದರೆ ಕಾಲೇಜು ಜೀವನದಲ್ಲಿ, ಹೈಪ್ರೋಫೈಲ್ ಗೆಳೆಯರಿಂದಾಗಿ ಚಲನಚಿತ್ರೋದ್ಯಮ ಕ್ಷೇತ್ರದಲ್ಲಿಯ ಸ್ನೇಹಿತರೊಂದಿಗೆ ಅವರ ಸಂಪರ್ಕ ಬೆಳೆಯಿತು. ಪರಿಣಾಮ, ಬೆಳ್ಳಿ ಪರದೆಯಲ್ಲಿ ಅಷ್ಟೇನು ಛಾಪು ಮೂಡಿಸದ, ಗಟ್ಟಿತಳವೂರದ ನಟ-ನಟಿಯರು ಆದಿತ್ಯ ಅವರ ಸುತ್ತ ಸೇರಿ ತಮ್ಮ ಸ್ವಾರ್ಥ ಸಾಧಿಸಲಾರಂಭಿಸಿದರು. ಅದಕ್ಕಾಗಿಯೇ ಟೆರೇಸ್ಗಳಲ್ಲಿ ರೆಸ್ಟೋರೆಂಟ್, ಮುಂಬಯಿಯಲ್ಲಿ ನೈಟ್ ಲೈಫ್ ಅಧಿಕೃತಗೊಳಿಸಲು ಆದಿತ್ಯ ಠಾಕ್ರೆ ತಮ್ಮ ರಾಜಕೀಯ ತೂಕವನ್ನು ಬಳಸಿದರು.
ಕಿಡಿ ಗೀರಿದ ಬಿಜೆಪಿ ಶಾಸಕ
ಮೊದಲನೆಯದಾಗಿ, ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್ ಆದಿತ್ಯ ವಿರುದ್ಧ ಪತ್ರವೊಂದನ್ನು ತೆಗೆದು ಸುಶಾಂತ್ ಸಿಂಗ್ ಪ್ರಕರಣಕ್ಕೆ ಕಿಡಿ ಗೀರಿದರು. ಆದರೆ, ಶಿವಸೇನೆಯಲ್ಲಿ ವಿಶೇಷವಾಗಿ ಟೀಮ್ ಆದಿತ್ಯ, ಎಂದು ಗುರುತಿಸಲ್ಪಡುವ ಯಾರೊಬ್ಬರೂ ಪ್ರತಿಕ್ರಿಯೆ ಬಿಡಿ, ಯುವಸೇನ ಮುಖ್ಯಸ್ಥನಿಗೆ ಮಾನಸಿಕ ಬೆಂಬಲ ನೀಡಲೂ ಮುಂದಾಗಲಿಲ್ಲ. ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಸಂಸದ ಸಂಜಯ್ ರಾವುತ್ ಇದಕ್ಕೆ ಅಪವಾದ. ಕಾಂಗ್ರೆಸ್ ನಿಂದ ಬಂದು ಬಿಜೆಪಿ ನಾಯಕರಾದ ಸಂಸದ ನಾರಾಯಣ್ ರಾಣೆ ಸಿಬಿಐ ತನಿಖೆಗೆ ಒತ್ತಾಯಿಸಿದ ನಂತರ ಅದನ್ನು ಅಂಗೀಕರಿಸಲಾಯಿತು. ಇದರ ಪರಿಣಾಮವಾಗಿ, ಮುಂಬೈ ಪೊಲೀಸರ ನೈತಿಕ ಬಲ ಕುಸಿತ ಮತ್ತು ಶಿವಸೇನೆ ಮೇಲೆ ಒತ್ತಡ ಬಂದು ಠಾಕ್ರೆಯವರ ಸಮಸ್ಯೆಗಳು ಈ ದಿನಗಳಲ್ಲಿ ಹೆಚ್ಚಿವೆ.
ಖರ್ಚಿಗೆ ಹಣವಿಲ್ಲ, ಕೈಯಲ್ಲಿ ಅಧಿಕಾರವಿಲ್ಲ– ಕೊರೋನಾದಿಂದ ಕಳೆದ ಐದು ತಿಂಗಳಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತೋಶ್ರೀಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್
ಅದನ್ನು ಸಹ ಅಜೋಯ್ ಮೆಹ್ತಾ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಮೂಲಕ ಮಾಡಲಾಗುತ್ತಿದ್ದರಿಂದ ಶಾಸಕರ ಪಾಲಿಗೆ ಅಲ್ಲೂ ನಿರಾಸೆ ಮೂಡಿದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ನಿಮ್ಮನ್ನು ಶಾಸಕರನ್ನಾಗಿ ಮಾಡಿ ಏನು ಪ್ರಯೋಜನ? ಎಂದು ಪ್ರಶ್ನೆಯನ್ನು ಶಾಸಕರಿಗೆ ಕ್ಷೇತ್ರದ ಜನರಿಂದ ಕೇಳಲಾಗುತ್ತಿದೆ.
ವಲಸೆ ಬಂದವರಿಗೆ ಮಣೆ- ಎಂಟು ತಿಂಗಳು ಕಳೆದರೂ, ನಿಗಮ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ನಡೆದಿಲ್ಲ. ಬೆರಳೆಣಿಕೆಯಷ್ಟು ನಡೆದ ನೇಮಕಾತಿಗಳಲ್ಲಿ ಹಕ್ಕಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುನಿಲ್ ಶಿಂಧೆ, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ ಸಾವಂತ್ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾಗ ಸೇನಾ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ರವೀಂದ್ರ ವೈಕರ್ ಅವರನ್ನು ಕೈಬಿಡಲಾಗದಂತಹ ಪರಿಸ್ಥಿತಿ ಇದೆ. ದೆಹಲಿ ಸಹಿತ ದೇಶಾದ್ಯಂತ ಪ್ರವಾಸ ಮಾಡಿ ಬಂದ ಪ್ರಿಯಾಂಕಾ ಚತುರ್ವೇದಿ ಅವರಿಗೆ ಆದಿತ್ಯ ಠಾಕ್ರೆ ನೇರ ಸಂಸದ ಪಟ್ಟವನ್ನೇ ನೀಡಿದ್ದರಿಂದ ಪಕ್ಷಕ್ಕಾಗಿ ಪರಿಶ್ರಮ ಪಟ್ಟವರಿಗೆ ಬೆಲೆ ಇಲ್ಲದಂತಾಗಿದೆ.
ಗ್ರಾಮೀಣ ಪ್ರದೇಶದ ಜನರ ಪ್ರತಿನಿಧಿಗಳ ಪರಿಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಸರ್ಕಾರದಲ್ಲಿಯ ನಾಲ್ವರು ಶಾಸಕರು ಕಳೆದ ಚುನಾವಣೆಗೆ ಜಮೀನು ಮತ್ತು ಬಂಗ್ಲೆ ಅಡವಿಟ್ಟು ಸಾಲ ಪಡೆದಿದ್ದರು. ಒಂದು ವರ್ಷದೊಳಗೆ ಸಾಲ ಮರುಪಾವತಿಸದಿದ್ದರೆ, ಅದಕ್ಕೆ ತುಳಸಿನೀರು ಬಿಡಬೇಕಾಗುತ್ತದೆ. ಇಂತಹ ಆರ್ಥಿಕ ಅಡಚಣೆಗಳಲ್ಲಿ ಸಿಲುಕಿರುವ ಶಾಸಕರನ್ನು ಬಿಜೆಪಿ ಗಾಳಕ್ಕೆ ಸಿಕ್ಕಿಸಬಹುದಾದ ಪರಿಸ್ಥಿತಿಯೂ ಇದೆ.
ಸಬ್ ಕುಚ್ ಆದಿತ್ಯ-
ಆದಿತ್ಯ ಠಾಕ್ರೆ ಅವರ ಮೊಂಡುತನದಿಂದಾಗಿ, ಪಕ್ಷ ಸರ್ವತೋಮುಖ ರಾಜಕೀಯದಲ್ಲಿ ತೊಡಗದೆ ‘ಟೀಮ್ ಆದಿತ್ಯ’ದತ್ತ ಒತ್ತು ನೀಡಲಾಗುತ್ತಿದೆ. ಅವರಲ್ಲಿ ಕಾರ್ಯಕ್ಷಮತೆ ಇಲ್ಲದಿದ್ದರೂ, ಅವರು ‘ಟೀಮ್ ಆದಿತ್ಯ’ದ ಸದಸ್ಯರಾಗಿದ್ದಾರೆ ಎಂದು ಅವರನ್ನು ಉತ್ತೇಜಿಸಲಾಗುತ್ತಿರುವುದರಿಂದ ಪಕ್ಷದಲ್ಲಿ ದೊಡ್ಡ ಹತಾಶೆ ಇದೆ.
ರಾಜ್ ಈಗ ಆದಿತ್ಯ ಠಾಕ್ರೆ ಅವರ ಸಹಾಯಕ್ಕೆ ಬರುತ್ತಾರೆಯೇ?
ಚಿತ್ರ ಜಗತ್ತಿನಲ್ಲಿ ರಾಜ್ ಠಾಕ್ರೆ ಅವರ ಇನ್ನೂ ಪ್ರಾಬಲ್ಯ ಇದೆ. ಶಾರುಖ್ ಖಾನ್ ಆಗಿರಲಿ ಅಥವಾ ಕರಣ್ ಜೋಹರ್ , ರಾಜ್ ಅವರ ಧ್ವನಿ ಕೇಳುತ್ತಲೇ ಕೃಷ್ಣಕುಂಜ್ ಗೆ ಓಡಿ ಬರುತ್ತಾರೆ. ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೂ ರಾಜ್ ಅವರ ವೈಯಕ್ತಿಕ ಸ್ನೇಹವಿದೆ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮುಂದೆ ಅನೇಕ ಹಿರಿಯ ನಟರು ಮತ್ತು ನಿರ್ಮಾಪಕರು ಮಂಡಿಯೂರಿ ಬರುತ್ತಿದ್ದರು. ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಕ್ಷೇತ್ರದ ಅವಕಾಶವಾದಿಗಳಿಂದ ದೂರವಿದ್ದಾರೆ. ಈಗ, ಆದಿತ್ಯ ಠಾಕ್ರೆ ಸಹಾಯಕ್ಕೆ ಚಿತ್ರರಂಗದ ಮೇಲೆ ಪ್ರಭಾವವಿರುವ ಚಿಕ್ಕಪ್ಪ ರಾಜ್ ಠಾಕ್ರೆ ಬರುತ್ತಾರೆಯೇ ಅಥವಾ ಸಿಬಿಐಯನ್ನು ಮುಷ್ಠಿಯಲ್ಲಿ ಹಿಡಿದಿರುವ ಗೃಹ ಸಚಿವ ಅಮಿತ್ ಷಾ ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇತಿಹಾಸದ ಪುನರಾವೃತಿಯಾಗಬಹುದೇ?-
ಇತಿಹಾಸವು ಪುನರಾವರ್ತನೆಯಾಗುತ್ತಿರುವುದು ಒಂದು ವಿಚಿತ್ರ ಕಾಕತಾಳೀಯ. ಆದರೆ ಆಗ ನಡೆದದ್ದು ಇಂದಿಗೂ ನಡೆಯುತ್ತಿದೆ. ರಮೇಶ್ ಕಿಣಿ ಅವರದು ಆತ್ಮಹತ್ಯೆಯೋ ಕೊಲೆಯೋ ಎಂಬ ಚರ್ಚೆಯ ಪ್ರಕರಣ ಘಟಿಸಿದ ನಂತರ ಪತ್ರಕರ್ತ ನಿಖಿಲ್ ವಾಗ್ಲೆ ಕಿಣಿ ಪ್ರಕರಣವನ್ನು ಎತ್ತಿ ಹಿಡಿದರು. ಈ ಪ್ರಕರಣದಲ್ಲಿ ಅವರು ನೇರವಾಗಿ ಬಾಳಾಸಾಹೇಬರನ್ನೇ ಟೀಕಿಸುತ್ತಿದ್ದರು. ಅದೇ ರೀತಿಯ ದೃಶ್ಯಇಂದು ಪುನಃ ನಡೆಯುತ್ತಿದೆ. ಪ್ರಸ್ತುತ ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣದಲ್ಲೂ ಅನುಮಾನದ ಹುತ್ತ ಮಾತೋಶ್ರೀಯ ಸುತ್ತಲೇ ಬೆಳೆಯಲಾರಂಭಿಸಿದೆ. ಈ ಬಾರಿ ಅರ್ನಾಬ್ ಗೋಸ್ವಾಮಿ ಮತ್ತು ಅವರ ರಿಪಬ್ಲಿಕ್ ಇಂಡಿಯಾ ಚಾನೆಲ್ ಶಿವಸೇನ ಪಕ್ಷ ಮತ್ತು ಶಿವಸೇನೆ ಮುಖ್ಯಸ್ಥರನ್ನೇ ಗುರಿಯಾಗಿಸುತ್ತಿರುವುದು ವಿಶೇಷ ಎನ್ನಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ