೧. ಆಪತ್ಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿರುವ ಪರ್ಯಾಯವೆಂದರೆ ‘ಆಪದ್ಧಧರ್ಮ! : ‘ಸದ್ಯ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ (ಲಾಕ್ಡೌನ್) ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಗೆ ನಿಷೇಧವಿದೆ. ಕೆಲವು ಸ್ಥಳಗಳಲ್ಲಿ ಕೊರೊನಾದ ಸೋಂಕು ಕಡಿಮೆಯಿದ್ದರೂ, ಅಲ್ಲಿನ ಜನರು ಮನೆಯಿಂದ ಹೊರಗೆ ಬರಲು ಅನೇಕ ನಿಷೇಧಗಳಿವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿಷೇಧಗಳು ಬಂದಿವೆ. ಕೊರೊನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ. ‘ಆಪದ್ಧರ್ಮ ಅಂದರೆ ‘ಆಪದ್ಧರ್ಮ ಕರ್ತವ್ಯೋ ಧರ್ಮಃ| ಅಂದರೆ ‘ ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು. ಇಂತಹ ಕಾಲದಲ್ಲಿಯೇ ಶ್ರೀ ಗಣೇಶಚತುರ್ಥಿಯ ವ್ರತ ಮತ್ತು ಗಣೇಶೋತ್ಸವ ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ, ಈ ಬಾರಿ ಉತ್ಸವದ ಸ್ವರೂಪದಲ್ಲಿ ಅಂದರೆ ಸಾಮೂಹಿಕ ಸ್ವರೂಪದಲ್ಲಿ ಈ ಉತ್ಸವವನ್ನು ಆಚರಿಸಲು ಮಿತಿಯಿದೆ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ‘ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?, ಎಂಬ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ‘ಹಿಂದೂ ಧರ್ಮವು ಯಾವ ಮಟ್ಟದವರೆಗೆ ಹೋಗಿ ಮಾನವನ ವಿಚಾರವನ್ನು ಮಾಡಿದೆ?, ಎಂಬುದನ್ನು ನಾವು ಕಲಿಯಬಹುದು. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಗಮನಕ್ಕೆ ಬರುತ್ತದೆ.
೨. ಗಣೇಶ ಚತುರ್ಥಿಯ ವ್ರತವನ್ನು ಹೇಗೆ ಆಚರಿಸಬೇಕು ? : ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ೧ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೊನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.
‘ಧರ್ಮಸಿಂಧುವಿನಲ್ಲಿ ‘ಗಣೇಶಚತುರ್ಥಿಗೆ ಗಣಪತಿಯ ಮೂರ್ತಿ ಹೇಗಿರಬೇಕು?, ಎಂಬ ವಿಷಯದಲ್ಲಿ ಮುಂದಿನ ನಿಯಮಗಳನ್ನು ನೀಡಲಾಗಿದೆ.
ತತ್ರ ಮೃನ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ! – ಧರ್ಮಸಿಂಧು, ಪರಿಚ್ಛೇದ ೨
ಅರ್ಥ: ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಶ್ರೀ ಗಣೇಶನ ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಷೋಪಚಾರ ಪೂಜೆಯನ್ನು ಮಾಡಿ….
ಇನ್ನೊಂದು ಸಂದರ್ಭಕ್ಕನುಸಾರ ‘ಸ್ಮೃತಿಕೌಸ್ತುಭ ಹೆಸರಿನ ಧರ್ಮಗ್ರಂಥದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಸಿದ್ಧಿವಿನಾಯಕನ ವ್ರತವನ್ನು ಮಾಡುವುದರ ಬಗೆಗಿನ ಉಲ್ಲೇಖವಿದೆ. ಇದರಲ್ಲಿ ‘ಮೂರ್ತಿ ಹೇಗಿರಬೇಕು ?, ಎಂಬುದರ ಸವಿಸ್ತಾರ ವರ್ಣನೆ ಬಂದಿದೆ.
ಸ್ವಶಕ್ತ್ಯಾ ಗಣನಾಥಸ್ಯ ಸ್ವರ್ಣರೌಪ್ಯಮಯಾಕೃತಿಮ್||
ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್|| -ಸ್ಮೃತಿಕೌಸ್ತುಭ
ಅರ್ಥ: ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು.
ಟಿಪ್ಪಣಿ : ‘ಶ್ರೀ ಗಣೇಶನ ಪೂಜೆಯನ್ನು ಹೇಗೆ ಮಾಡಬೇಕು? ಯಾವ ಸಾಮಗ್ರಿಗಳು ಇರಬೇಕು?, ಈ ಸಂದರ್ಭದಲ್ಲಿ ಯಾರಿಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ, ಅವರು ಸನಾತನದ ‘ಗಣೇಶ ಪೂಜೆ ಮತ್ತು ಆರತಿ, ಈ ಆಪ್ ಡೌನಲೋಡ್ ಮಾಡಬೇಕು ಅಥವಾ ‘ಸನಾತನ ಸಂಸ್ಥೆಯ
www.Sanatan.org ಈ ಜಾಲತಾಣಕ್ಕೆ ಭೇಟಿ ನೀಡಬೇಕು.1. Android App : sanatan.org/ganeshapp
2. Apple iOS App : sanatan.org/iosganeshapp
(ಸೌಜನ್ಯ: ಸನಾತನ ಸಂಸ್ಥೆ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ