ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್
2013ರಲ್ಲಿ ಪೋಟುಗಾಡು ಚಿತ್ರದ ಮೂಲಕ ತೆಲಗು ಚಿತ್ರ ರಂಗಕ್ಕೆ ಕಾಲಿಟ್ಟ ನಟಿ ಸಾಕ್ಷಿ ಚೌದರಿ ಇದೀಗ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾಳೆ.
ಇದಕ್ಕೆ ಕಾರಣ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬೋಲ್ಡ್ ಚಿತ್ರಗಳು.
ಟ್ವೀಟರ್ @SakshiCh2017 ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಸಾಕ್ಷಿ ತನ್ನ ಬೋಲ್ಡ್ ಫೋಟೋ ಮತ್ತು ವೀಡಿಯೋ ಹರಿಬಿಟ್ಟಿದ್ದು, ಅವುಗಳನ್ನು ನೋಡಿದವರು ಆಕೆಗೆ ಒಂದು ರಾತ್ರಿಗೆ ಒಂದೊಂದು ಕೋಟಿ ರೂ. ಆಫರ್ ನೀಡುತ್ತಿದ್ದಾರಂತೆ. ಹಾಗಂತ ಅವಳೇ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾಳೆ. ನನ್ನ ಫೋಟೋ ನೋಡಿ ಖುಷಿಪಡಿ, ಆದರೆ ಇಂತಹ ಆಫರ್ ಗಳನ್ನು ನೀಡಬೇಡಿ. ಏಕೆಂದರೆ ನಾನು ಮಾರಾಟಕ್ಕಿಲ್ಲ ಎಂದು ಆಕೆ ಖಡಾಖಂಡಿತವಾಗಿ ತಿಳಿಸಿದ್ದಾಳೆ.
”ನನಗೆ ಆಫರ್ ಮಾಡುತ್ತಿರುವವರು ಮೂರ್ಖರು. ಏಕೆಂದರೆ, ನಾನು ಮಾರಾಟಕ್ಕಿಲ್ಲ, ನಾನು ಅಭಿನಯಿಸಿರುವ ಮ್ಯಾಗ್ನೆಟ್ ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಮೊದಲ ದಿನ ಮೊದಲ ಶೋ ನೋಡಿ” ಎಂದು ಆಕೆ ತಿಳಿಸಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ