Latest

ಗುತ್ತಿಗೆ ಪೌರಕಾರ್ಮಿಕರಿಗೂ  ಹೆಲ್ತ್‌ಕಾರ್ಡ್ -ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಖಾಯಂ ನೌಕರರಿಗೆ ನೀಡಿರುವಂಥೆ ಗುತ್ತಿಗೆ ಪೌರ ಕಾರ್ಮಿಕರಿಗೂ ಸರಕಾರದಿಂದ ಹೆಲ್ತ್‌ಕಾರ್ಡ್‌ ಹಾಗೂ ಇತರೆ ಸರಕಾರಿ ಸೌಲಭ್ಯ ಒದಗಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಭರವಸೆ ನೀಡಿದರು. 
ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಗುತ್ತಿಗೆ ಪೌರ ಕಾರ್ಮಿಕ ಸಂಘಟನೆಯೊಂದಿಗೆ ಇಂದು ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. 
ಗುತ್ತಿಗೆ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಸರಕಾರಿ ರಜೆ ದಿನ ನೀಡುವುದು, ಗರ್ಭಿಣಿ ಯರಿಗೆ ವೇತನ ಸಹಿತ ರಜೆ, 250 ಕಾರ್ಮಿಕರ ಖಾಯಂಗೊಳಿಸುವುದು ಸೇರಿದಂತೆ ಹಲವು ಸಮಸ್ಯೆ ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸುವ ಭರವಸೆ ನೀಡಿದ್ದೇನೆ ಎಂದರು. 
ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಲ್ತ್‌ಕಾರ್ಡ್‌ ವಿತರಿಸಲುವುದು ಅನಿವಾರ್ಯವಿದ್ದು, ಈ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. 
ಪೌರಕಾರ್ಮಿಕರ ಹೆಸರಲ್ಲಿ‌ ಸಾಕಷ್ಟು ಸಂಘ ಸಂಸ್ಥೆಗಳು ತಲೆ ಎತ್ತಿವೆ. ಇದರಿಂದ ಬಿಬಿಎಂಪಿ ಆಡಳಿತಕ್ಕೂ ಕಷ್ಟವಾಗಿದೆ. ಹೀಗಾಗಿ ಒಂದೆರಡು ನೋಂದಣಿಯಾಗಿರುವ ಸಂಘಗಳನ್ನಷ್ಟೇ ಗುರುತಿಸಿ, ಪೌರಕಾರ್ಮಿಕರ ಪ್ರತಿ ನಿರ್ಧಾರಕ್ಕು ಗುರುತಿಸಿದ ಒಂದೆರಡು ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button