ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯವನ್ನು ಕಣಕುಂಬಿ ಬಳಿ ವಶಪಡಿಸಿಕೊಳ್ಳಲಾಗಿದೆ.
ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಎಂದು ನಮೂದಿರುವ ೧೮೦ ಎಂಎಲ್ ಅಳತೆಯ ಮ್ಯಾಕ ಡೋವೆಲ್ ನಂ:೧ ವಿಸ್ಕಿ ೪೮ ಪೆಟ್ಟಿಗೆಗಳಲ್ಲಿ ೨೩೦೪ ಬಾಟಲಿಗಳು ಒಟ್ಟು ೪೧೪.೭೨೦ ಲೀಟರ ಗೋವಾ ಮದ್ಯ, ೧೮೦ ಎಂಎಲ್ ಅಳತೆಯ ಇಂಪೀರಿಯಲ್ ಬ್ಲ್ಯೂ ವಿಸ್ಕಿ ೧೨ ಪೆಟ್ಟಿಗೆಗಳಲ್ಲಿ ೫೭೬ ಬಾಟಲಿಗಳು ಒಟ್ಟು ೧೦೩.೬೮೦ ಲೀಟರ (ಒಟ್ಟು ೫೧೮.೪೦೦ ಲೀ) ಗೋವಾ ಮದ್ಯ ಪತ್ತೆಯಾಗಿದೆ.
ಬೆಳಿಗ್ಗೆ ೪-೪೫ ಗಂಟೆಯ ಸುಮಾರಿಗೆ ಖಾನಾಪೂರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯಲ್ಲಿ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಬಿಳಿ ಬಣ್ಣದ ಟಾಟಾ ಕಂಪನಿಯ ಗೂಡ್ಸ್ ಕ್ಯಾರಿಯರ್ ವಾಹನ (ನೊಂದಣಿ ಸಂಖ್ಯೆ ಎಂಎಚ್-೧೨ ಎಫ್ಝಡ್-೭೧೬೪) ದಲ್ಲಿ ಆರೋಪಿತರಾದ ರಾಮ ಕಚ್ರು ಕರಾಂಡೆ (ವಯಸ್ಸು:೨೬ ವರ್ಷ, ಉದ್ಯೋಗ: ಡ್ರೈವರ ಜಾತಿ: ಹಿಂದೂ ಮಾಂಗ್ ಸಾ: ತೆರ್ವಿ ಲೈನ್, ತೋರಟವಾಡಿ, ಜಿಲ್ಲಾ: ಬೀಡ್ ಮಹಾರಾಷ್ಟ್ರ ರಾಜ್ಯ) ಹಾಗೂ ಕಿರಣ ಕಚ್ರು ಕರಾಂಡೆ (ವಯ:೨೩ ವರ್ಷ, ಜಾತಿ: ಹಿಂದೂ ಮಾಂಗ್ ಉದ್ಯೋಗ: ಲೇಬರ್ ಸಾ: ತೆರ್ವಿ ಲೈನ್, ತೋರಟವಾಡಿ, ಜಿಲ್ಲಾ: ಬೀಡ್ ಮಹಾರಾಷ್ಟ್ರ ರಾಜ್ಯ) ಇವರುಗಳನ್ನು ಬಂಧಿಸಲಾಗಿದೆ.
ಎಂಎಚ್-೧೪ ಎಝಡ್-೨೭೧೯ ನೇದ್ದರ ವಾಹನ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.
ಡಾ:ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಬೆಳಗಾವಿ ವಿಭಾಗ, ಬೆಳಗಾವಿ, ಜಯರಾಮೇಗೌಡ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ ಮಾರ್ಗದರ್ಶನದಲ್ಲಿ ಆರ್.ಬಿ.ಹೊಸಳ್ಳಿ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ಸಿ.ಎಸ್.ಪಾಟೀಲ ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗ, ಬೆಳಗಾವಿ, ಎಂ.ಸಿ.ಗಲಗಲಿ, ಅಬಕಾರಿ ಉಪ ನಿರೀಕ್ಷಕರು, ಶ್ರೀಕಾಂತ ಅಸೂದೆ ಅಬಕಾರಿ ಉಪ ನಿರೀಕ್ಷಕರು, ರಾಜು ಹೊಸಮನಿ ಅಬಕಾರಿ ಉಪ ನಿರೀಕ್ಷಕರು, ಸುನೀಲ ಪಾಟೀಲ ಅಬಕಾರಿ ರಕ್ಷಕ, ಕೆ.ಬಿ.ಕುರಹಟ್ಟಿ ಅಬಕಾರಿ ರಕ್ಷಕರ, ಬಿ.ಎಸ್.ಅಟಿಗಲ್ ಅಬಕಾರಿ ರಕ್ಷಕ ಹಾಗೂ ವಿಠ್ಠಲ ಕೌರಿ ಅಬಕಾರಿ ರಕ್ಷಕ, ಮಂಜು ಮಾಸ್ತಮರಡಿ ಅಬಕಾರಿ ರಕ್ಷಕ, ಗುಂಡು ಪೂಜಾರಿ ಅಬಕಾರಿ ರಕ್ಷಕ ಕಣಕುಂಬಿ ತನಿಖಾ ಠಾಣೆ, ಸಿಬ್ಬಂದಿ ಪಾಲ್ಗೊಂಡಿದ್ದರು. ಜಪ್ತುಪಡಿಸಿದ ವಾಹನ ಹಾಗೂ ಮಾಲಿನ ಒಟ್ಟು ಮೌಲ್ಯ ರೂ. ೧೦,೭೬,೦೦೦.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ