Kannada NewsKarnataka NewsLatest

ಶಿಕ್ಷಕರ ದಿನಾಚರಣೆಗೆ ಹುಕ್ಕೇರಿ ಶ್ರೀಗಳ ವಿಶಿಷ್ಟ ಕೊಡುಗೆ

 

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಶನಿವಾರ ಶಿಕ್ಷಕರ ದಿನಾಚರಣೆ. ಈ ಸಂದರ್ಭದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಿಶಿಷ್ಟ ವಚನವೊಂದನ್ನು ರಚಿಸಿ ಹಾಡಿದ್ದಾರೆ. ಅದರ ಜೊತೆಗೆ ಸಂದೇಶವನ್ನೂ ನೀಡಿದ್ದಾರೆ.

ವಚನದ ವೀಡಿಯೋ ತಪ್ಪದೆ ನೋಡಿ

ಸಂದೇಶದ ಪೂರ್ಣ ಪಾಠ ಇಲ್ಲಿದೆ:

ಶಿಕ್ಷಕರು ದೇಶವನ್ನು ರಕ್ಷಿಸುವಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಂಡವರು. ಇವತ್ತು ಇಡೀ ದೇಶದಲ್ಲಿ ಶಾಂತಿ, ನೆಮ್ಮದಿ ಇದೆ ಅಂದರೆ ಅದಕ್ಕೆ ಕಾರಣ ಶಿಕ್ಷಕರು. ಶಿಕ್ಷಕರಿಂದ ಸಾಕಷ್ಟು ಕಲಿತಿದ್ದೇವೆ, ಕಲಿಯುತ್ತಿದ್ದೇವೆ. ಇವತ್ತು ಎಲ್ಲಾ ವರ್ಗದಲ್ಲಿ ನಾವು ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಕಾರಣ ಶಿಕ್ಷಕರು. ಶಿಕ್ಷಣವನ್ನು ಅಚ್ಚುಕಟ್ಟಾಗಿ ಕಲಿತರೆ ಖಂಡಿತವಾಗಿಯೂ ನಾವು ಸತ್ಪ್ರಜೆಗಳಾಗಿ ಬಾಳಬಹುದು. ಶಿಕ್ಷಕರ ಆದರ್ಶವನ್ನು ಅವರ ವ್ಯಕ್ತಿತ್ವವನ್ನು ನಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಶಿಕ್ಷಕರಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಇತಿಹಾಸ ಇದೆ. ನಾವೆಲ್ಲಾ ಹೆಮ್ಮೆ ಪಡಬೇಕು. ನಮ್ಮ ಹುಟ್ಟುಹಬ್ಬವನ್ನು ನಾವು ವೈಯಕ್ತಿಕವಾಗಿ ಆಚರಿಸಿಕೊಂಡು ಸಂತೋಷಪಡುತ್ತೇವೆ. ಆದರೆ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅಂದು ನನ್ನ ಹುಟ್ಟುಹಬ್ಬ ಬೇಡ.  ಶಿಕ್ಷಕರ ದಿನಾಚರಣೆ ಆಗಲಿ ಎಂದು ತುಂಬಾ ಖುಷಿಯಿಂದ ಹೇಳಿರುವ ಅಪರೂಪದ ಮೇರುಪರ್ವತ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು. ನಾವು ಕೂಡ ಶಿಕ್ಷಕರ ಬಗ್ಗೆ ಅಗಾಧವಾದ  ಗೌರವವನ್ನು ಇಟ್ಟುಕೊಂಡಿದ್ದೇವೆ. ನಾವು ಇಷ್ಟು ಸಾಧಿಸಿದ್ದೇವೆ ಅಂತಂದರೆ ಕಲಿಸಿರುವ ಶಿಕ್ಷಕರು ಅದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಎಲ್ಲರೂ ಶಿಕ್ಷಕರನ್ನು ಗೌರವಿಸೋಣ, ಶಿಕ್ಷಕರ ಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button