Latest

ನನ್ನ ಹೆಸರು ಹೇಳುತ್ತಿರುವುದಕ್ಕೆ ಕಾರಣ ಗೊತ್ತು ನನಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರಣೆ ದಾರಿತಪ್ಪಿಸಲು ನನ್ನ ಹೆಸರನ್ನು ಹೇಳಲಾಗುತ್ತಿದೆ. ಈ ಮಾಫಿಯಾ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ತನಿಖೆ ದಿಕ್ಕು ತಪ್ಪಿಸುವುದು ಸರಿಯಲ್ಲ.

ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಈಗ ಜಮೀರ್ ಅಹ್ಮದ್ 6 ವರ್ಷಗ ಹಿಂದೆನ ವಿಚಾರವನ್ನು ಈಗ ತಂದು ವಿಷಯಾಂತರ ಮಾಡುತ್ತಿದ್ದಾರೆ. ಜಮೀರ್ ನನ್ನ ಯಾಕೆ ಕರೆದುಕೊಂಡು ಹೋಗುತ್ತಾರೆ. ನಮಗೆ ಹೋಗೊದಕ್ಕೆ ಬರಲ್ವಾ? ಜಮೀರ್ ಹೇಳಿಕೆಗೆ ನಿನ್ನೆಯೇ ಸ್ಪಷ್ಟನೆ ನೀಡಿದ್ದೇನೆ. ಡ್ರಗ್ಸ್ ಪ್ರಕರಣಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್‍ವುಡ್ ಮಾತ್ರವಲ್ಲ ಎಲ್ಲ ಕಡೆ ಇದೆ. ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ. ಕ್ಯಾಸಿನೋದಲ್ಲೇ ಡ್ರಗ್ಸ್ ಇರುತ್ತೆ ಅಂತ ಹೇಳುವುಕ್ಕೆ ಆಗಲ್ಲ ಎಂದು ತಿಳಿಸಿದರು.

ಡ್ರಗ್ಸ್ ಅನ್ನೋದು ನಮ್ಮ ಬೆಂಗಳೂರಿನಲ್ಲಿ ನೈಟ್ ಬಾರ್ ಗಳಲ್ಲೂ ಇದೆ. ಸಂಜೆ ನಂತರ ಮಲ್ಯ ರೋಡ್ ಮತ್ತು ಎಂಜಿ ರೋಡ್‍ಗೆ ಹೋದರೆ ನಿಮಗೆ ಗೋತಾಗುತ್ತೆ. ಬೆಂಗಳೂರಿನಲ್ಲಿ ಸಂಜೆ ಮೇಲೆ ನೈಟ್ ಪಾರ್ಟಿಗಳು ನಡೆಯುತ್ತೆ. 5 ಸ್ಟಾರ್ ಹೋಟಲ್‍ಗಳಲ್ಲಿ ಬೆಳಗ್ಗೆ 5 ಗಂಟೆವರೆಗೂ ಮ್ಯೂಸಿಕ್ ಹಾಕಿಕೊಂಡು ನಡೆಸೋ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button