ಹಲಗಾದಲ್ಲೊಂದು ಹೃದಯ ವಿದ್ರಾವಕ ಘಟನೆ

ಬಾಲ್ಯವಿವಾಹವಾಗಿದ್ದ ಭಾರತಿ ಬೇರೊಬ್ಬನೊಂದಿಗೆ ವಾಸವಾಗಿದ್ದಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸಮೀಪದ ಹೊರವಲಯದ ಹಲಗಾದಲ್ಲಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿದ್ದ ಹಲಗಾದ ಪ್ರಜ್ವಲ್ (15) ಮತ್ತು ತಾಯಿ ಭಾರತಿ ಗರಾಣಿ (36) ಆತ್ಮಹತ್ಯೆ ಮಾಡಿಕೊಂಡವರು. ಭಾರತಿ ಬೇಕರಿ ನಡೆಸುತ್ತಿದ್ದಳು.
ಭಾರತಿಯನ್ನು ಗೋಕಾಕದ ವ್ಯಕ್ತಿಯೊಬ್ಬರಿಗೆ ಬಾಲ್ಯವಿವಾಹ ಮಾಡಿಕೊಡಲಾಗಿತ್ತು. ಆದರೆ 8 ವರ್ಷದ ಹಿಂದೆ ಗಂಡನನ್ನು ಬಿಟ್ಟು ಹಲಗಾದಲ್ಲಿ ಇನ್ನೊಬ್ಬನೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಅವಳಿಗೆ ಮೊದಲ ಗಂಡನಿಂದ ಪ್ರಜ್ವಲ್ ಎನ್ನುವ ಮಗನಿದ್ದ.
ಭಾರತಿಯ ಜೊತೆಗೆ ವಾಸಿಸುತ್ತಿದ್ದ ವ್ಯಕ್ತಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಆತ ಮನೆಗೆ ಬಂದು ನೋಡಿದಾಗ ಭಾರತಿ ಮತ್ತು ಪ್ರಜ್ವಲ್ ಇಬ್ಬರೂ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ.
ಇಬ್ಬರೂ ಮಾತನಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕಕಾಲಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಹಿರೇಬಾಗೇವಾಡಿ ಠಾಣೆ ಇನಸ್ಪೆಕ್ಟರ್ ವಿಜಯಕುಮಾರ ಸಿನ್ಹೂರ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.



