Latest

ಸೆ.21ರಿಂದ ರಾಜ್ಯದಲ್ಲಿ ಶಾಲೆಗಳು ಪ್ರಾರಂಭ, ಆದರೆ…..

ಪ್ರಗತಿವಾಹಿನಿ ಸುದ್ದಿ, ಮೈಸೂರು – ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಸೆ.21ರಿಂದ ಶಾಲೆಗಳು ಆರಂಭವಾಗಲಿದೆ. ಆದರೆ ತರಗತಿಗಳು ನಡೆಯುವುದಿಲ್ಲ. ಬದಲಾಗಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

ಶಿಕ್ಷಣ ಸಚಿವ ಸುರೇಶ ಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಸೆ.21ರಿಂದ 9ರಿಂದ 12ನೇ ತರಗತಿ ಆರಂಭವಾಗಲಿದೆ ಎಂದು ಕೇಂದ್ರ ಸರಕಾರದ ಅನ್ ಲೈಕ್ 4.0 ದಲ್ಲಿ ತಿಳಿಸಲಾಗಿತ್ತು. ಪಾಲಕರ ಲಿಖಿತ ಒಪ್ಪಿಗೆ ಪತ್ರ ಪಡೆದು ಶಾಲೆಗಳನ್ನು ನಡೆಸುವಂತೆ ತಿಳಿಸಲಾಗಿತ್ತು.

Home add -Advt

ಆದರೆ ರಾಜ್ಯ ಸರಕಾರದ ಪ್ರಕಾರ ತರಗತಿಗಳು ಆರಂಭವಾಗುವುದಿಲ್ಲ. ಸೆ.21ರಿಂದ ತಿಂಗಳಾಂತ್ಯದವರೆಗೆ ಪ್ರವೇಶ ಪ್ರಕ್ರಿಯೆ ನಡೆಸಬೇಕು. 1ರಿಂದ 10ನೇ ತರಗತಿವರೆಗಿನ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಈ ಅವಧಿಯಲ್ಲೇ ಮುಗಿಸಬೇಕು. ಕೇವಲ ಒಂದೇ ಸೆಮಿಸ್ಟರ್ ಫೀ ಮಾತ್ರ ಪಡೆಯಬೇಕು ಎಂದು ತಿಳಿಸಿದ್ದಾರೆ.

ತರಗತಿಗಳನ್ನು ಆರಂಭಿಸುವ ಕುರಿತು ಇಲಾಖೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಈ ತಿಂಗಳಾಂತ್ಯದ ನಂತರ ಈ ಕುರಿತು ನಿರ್ಧಾರ ಪ್ರಕಟಿಸಬಹುದು. ಹಂತಹಂತವಾಗಿ ಪರಿಸ್ಥಿತಿ ನೋಡಿಕೊಂಡು ಕ್ರಮ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸಧ್ಯಕ್ಕಂತೂ ಮಕ್ಕಳನ್ನು ತರಗತಿಗಳಿಗಾಗಿ ಶಾಲೆಗೆ ಕರೆಸುವಂತಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ.

ರಾಜ್ಯದಲ್ಲಿ ಜೂನ್ 8ರಿಂದಲೇ ಶಾಲೆಗಳು ತೆರೆದಿವೆ. ಶಿಕ್ಷಕರು ಶಾಲೆಗೆ ಹೋಗುತ್ತಿದ್ದಾರೆ. ಈ ಮಧ್ಯೆ ವಿದ್ಯಾಗಮನ ಎನ್ನುವ ಯೋಜನೆಯೂ ನಡೆಯುತ್ತಿದೆ.

Related Articles

Back to top button