ಎಸಿಬಿಯಲ್ಲಿ ಕೇಸ್ ದಾಖಲಾಗಿದೆ ಎಂದು ನಿಮಗೂ ಪೋನ್ ಬಂದೀತು… ಇಬ್ಬರು ಖದೀಮರು ಅಂದರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಸಿಬಿ ಕಚೇರಿಯಲ್ಲಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ. ಇಲ್ಲೇ ಸೆಟ್ಲಮೆಂಟ್ ಮಾಡಿಕೊಂಡು ಸಮಸ್ಯೆಯಿಂದ ಪಾರಾಗಿ ಎಂದು ನಿಮಗೂ ಪೋನ್ ಬರಬಹುದು. ಅಂತಹವರ ವಿರುದ್ಧ ಹುಷಾರಾಗಿರಿ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
ಬೆಳಗಾವಿ ಎಸಿಪಿ ಎಸ್ಪಿ ಬಿ.ಎಸ್.ನೇಮಗೌಡ ಇಂತಹ ಮನವಿಯನ್ನು ಮಾಡಿದ್ದಾರೆ. ಇದಕ್ಕೆ ಕಾರಣ ಬೈಲಹೊಂಗಲದಲ್ಲಿ ನಡೆದ ಪ್ರಕರಣ.
ಬೈಲಹೊಂಗಲದಲ್ಲಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಬಿ.ಆರ್.ಹುಲಗಣ್ಣವರ್ ಅವರಿಗೆ ಇಂತಹುದೇ ಕರೆ ಮಾಡಿದ್ದ ಇಬ್ಬರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹುಲಗಣ್ಣವರ್ ಅವರಿಗೆ ಕರೆ ಮಾಡಿದ ವ್ಯಕ್ತಿ, ನಾನು ಎಸಿಬಿ ಅಧಿಕಾರಿಯಾಗಿದ್ದು, ನಿಮ್ಮ ಮೇಲೆ ಎಸಿಬಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗ ನೀವು ನಿವೃತ್ತಿಯ ಅಂಚಿನಲ್ಲಿದ್ದೀರಿ. ನಿಮ್ಮ ಮೇಲೆ ರೇಡ್ ಮಾಡಿದರೆ ಪೆನ್ಶನ್ ಕೂಡ ಸಿಗುವುದಿಲ್ಲ. ಹಾಗಾಗಿ 5 ಲಕ್ಷ ರೂ. ನೀಡಿ ಸೆಟ್ಲಮೆಂಟ್ ಮಾಡಿಕೊಳ್ಳಿ ಎಂದು ಹೇಳಿದ್ದ.
ಅವರು ಪೊಲೀಸ್ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ದೇಶನೂರಿನ (ಹಾಲಿ ವಣ್ಣೂರು) ವಿಶಾಲ ಭಾಂವೆಪ್ಪ ಪಾಟೀಲ ಹಾಗೂ ಬೆಂಗಳೂರಿನ ಶ್ರೀನಿವಾಸ ತಂದೆ ಅಶ್ವತ್ಥ ನಾರಾಯಣ ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ