Latest

ಸಚಿವ ಸ್ಥಾನ ತ್ಯಾಗ ಮಾಡ್ತಾರಾ ಸಿ.ಟಿ.ರವಿ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ತಾವು ಸಚಿವ ಸ್ಥಾನದಿಂದ ಕೆಳಗಿಳಿಯಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನನಗೆ ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಪಕ್ಷ ಸಂಘಟನೆ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಪಕ್ಷ ಯಾವಾಗ ಸೂಚಿಸುತ್ತೋ ಆಗ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

Home add -Advt

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ನನಗೆ ಕರೆ ಮಾಡಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡುವ ಬಗ್ಗೆ, ಹಿಒಸ ಜವಾಬ್ದಾರಿ ನೀಡುವ ಬಗ್ಗೆ ತಿಳಿಸಿ ಯೋಚಿಸಿ ಹೇಳು ಎಂದರು. ನಾನು ಮರುಯೋಚನೆ ಮಾಡದೇ ತಕ್ಷಣ ಒಪ್ಪಿಕೊಂಡೆ. ನಾನು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ. ಈಗ ಸಿಗುತ್ತಿರುವ ಎಲ್ಲಾ ಜವಾಬ್ದಾರಿಗಳು ಪಕ್ಷ ನನ್ನ ಗುರುತಿಸಿ ನೀಡಿದ್ದು. ಪಕ್ಷ ಸಂಘಟನೆ ಮಾಡುವ ಕೆಲಸವನ್ನು ನಾನು ಮಾಡುತ್ತೇನೆ. ನನ್ನ ಯೋಗಕ್ಷೇಮ ಪಕ್ಷ ನೋಡಿಕೊಳ್ಳುತ್ತದೆ ಎಂದರು.

Related Articles

Back to top button