ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್.ಆಮೂರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಡಾ.ಶ್ರೀ.ಗುರುರಾಜ ಶ್ಯಾಮಾಚಾರ ಆಮೂರರು(೦೮-೦೫-೧೯೨೫-) ಹಾನಗಲ್ ತಾಲೂಕಿನ ಬೊಮ್ಮನಳ್ಳಿಯಲ್ಲಿ ಜನಿಸಿದ್ದರು. ಧಾರವಾಡದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯ ಪರಿಷತ್ ಅವರಿಗೆ ನೃಪತುಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ “ಭುವನದ ಭಾಗ್ಯ” ಎಂಬ ಕೃತಿಗೆ 1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.
ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿಎ (ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾ, ಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.
14 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ ಹಾಗೂ 3 ವಿದ್ಯಾರ್ಥಿಗಳಿಗೆ ಎಂಫಿಲ್ ಮಾರ್ಗದರ್ಶ ನೀಡಿದ್ದರು.
ಆಮೂರರ ಸಾಹಿತ್ಯ ಕೃತಿಗಳು:
- ಆಧುನಿಕ ಕನ್ನಡ ವಿಮರ್ಶೆ.
- ಮಹಾಕವಿ ಮಿಲ್ಟನ್
- ಕೃತಿಪರೀಕ್ಷೆ.
- ಅ.ನ.ಕೃಷ್ಣರಾಯ
- ಭುವನದ ಭಾಗ್ಯ
- ವ್ಯವಸಾಯ
- ಅರ್ಥಲೋಕ
- ಕನ್ನಡ ಕಥನ ಸಾಹಿತ್ಯ
- ಕಾದಂಬರಿ
- ಸಾತ್ವಿಕ ಪಥ
- ಕಾದಂಬರಿ ಸ್ವರೂಪ
- ದ.ರಾ.ಬೇಂದ್ರೆ
- ಅಮೃತವಾಹಿನಿ
- ಶಾಂತಿನಾಥ ದೇಸಾಯಿ
- ಬೇಂದ್ರೆ ಕಾವ್ಯದ ಪ್ರತಿಮಾಲೋಕ
- ಕಥನ ಶಾಸ್ತ್ರ
- ಸೀಮೊಲ್ಲಂಘನ
- ಸಮಕಾಲೀನ ಕಥೆ ಕಾದಂಬರಿ,
- ಸಣ್ಣಕತೆ.
- ಕನ್ನಡ ಕಾದಂಬರಿಯ ಬೆಳವಣಿಗೆ,
- ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ
- Adya Rangachar
- A Critical spectrum
- Images and Impressions
- A.N.Krishnarao
- The Concept of Comedy
- Poetics of T.S.Eliot
- Essays on modern Kannada literature
ಆಮೂರರಿಗೆ ಬಂದ ಪ್ರಮುಖ ಪ್ರಶಸ್ತಿಗಳು –
- ಭುವನದ ಭಾಗ್ಯ’ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕೊಲ್ಕತ್ತಾ)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ,ಅ.ನ.ಕೃ.ಪ್ರಶಸ್ತಿ ಮುಂತಾದ ಎಂಟು ಪುರಸ್ಕಾರಗಳು
- ಪಂಪ ಪ್ರಶಸ್ತಿ
- ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ.೨೦೧೬
- ನೃಪತುಂಗ ಪ್ರಶಸ್ತಿ – 2020
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ