Kannada NewsKarnataka NewsLatest

ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ವರ್ಚುವಲ್ ಲ್ಯಾಬ್‌ಗಳ ಮೂಲಕ ತಂತ್ರಜ್ಞಾನ ಕಲಿಕೆ

ಎನ್ ಟಿ ಕೆ ಸುರತ್ಕಲ್ ಸಹಯೋಗದಲ್ಲಿ ವಿಟಿಯು ಅನುಷ್ಠಾನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯುಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ ಟಿ ಕೆ ) ಸಹಯೋಗದೊಂದಿಗೆ   ವಿ ತಾ ವಿ ಎಲ್ಲಾ ಅಂಗಸಂಸ್ಥೆಗಳಲ್ಲಿ  ವರ್ಚುವಲ್ ಲ್ಯಾಬ್ಗಳ ಮೂಲಕ ತಂತ್ರಜ್ಞಾನ ಕಲಿಕೆಯನ್ನು ಅನುಷ್ಠಾನಗೊಳಿಸುತ್ತಿದೆ

ನಿಟ್ಟಿನಲ್ಲಿ ವಿಟಿಯು ಎನ್ಐಟಿಕೆ ಸುರತ್ಕಲ್ ಅವರ ಸಹಯೋಗದೊಂದಿಗೆ ಇದೆ ೨೫ ರಂದು ವಿಟಿಯು ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರ ಆನ್ಲೈನ್ ಸಭೆಯನ್ನು ಆಯೋಜಿಸಿತ್ತು. ಇದರಲ್ಲಿ ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಹಾಗೂ ಎನ್ ಟಿ ಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ಮುಖ್ಯಸ್ಥ ಪ್ರೊ.ಕೆ.ವಿ.ಗಂಗಾಧರನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 

ವರ್ಚುವಲ್ ಲ್ಯಾಬ್ಸ್ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಧನಸಹಾಯದ ಅಡಿಯಲ್ಲಿ ಐಸಿಟಿ ಮೂಲಕ ಶಿಕ್ಷಣದ ರಾಷ್ಟ್ರೀಯ ಮಿಷನ್ ಕಾರ್ಯಕ್ರಮವಾಗಿದ್ದು ಟಿ ದೆಹಲಿ ಮುಂದಾಳತ್ವದಲ್ಲಿ ರಾಷ್ಟ್ರದ ಪ್ರಮುಖ ಹನ್ನೊಂದು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು  ವರ್ಚುವಲ್ ಲ್ಯಾಬ್ಗಳನ್ನು ಅಭಿವೃದ್ಧಿಪಡಿಸಿವೆ ಇದರಲ್ಲಿ ಕರ್ನಾಟಕದ  ಎನ್ ಟಿ ಕೆ ಯು ಒಂದಾಗಿದೆ.   ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಕಲಿಕೆಗೆ ಸಹಾಯ ಮಾಡಲು ಇದು ಒಂದು ಉತ್ತಮ ವೇದಿಕೆಯಾಗಿದೆ. ಇದು ಉಚಿತವಾಗಿದ್ದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಹೊಂದಿದೆ ಎಂದು ಪ್ರೊ. ಕೆ. ವಿ. ಗಂಗಾಧರನ ಹೇಳಿದರು.

ವಿಟಿಯು ಇಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದ ವರ್ಚುವಲ್ ಲ್ಯಾಬ್ಗಳನ್ನು ಬಳಸಲಿದೆ. ಎಲ್ಲ ಇಂಜಿನಿಯರಿಂಗ್ ಸಂಸ್ಥೆಗಳು ನೋಡಲ್ ಕೇಂದ್ರಗಳಾಗಿ ಕೆಲಸ ಮಾಡಲಿದ್ದು ಆಯಾ ಸಂಸ್ಥೆಗಳ  ಅಧ್ಯಾಪಕರನ್ನು ಟ್ರೈನ್ ಟ್ರೇನರ್ಸ್ ಅಡಿಯಲ್ಲಿ ತರಬೇತಿ ನೀಡಲಿದ್ದು ನಂತರ ಅವರು ಆಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಇದರ ಬಳಕೆ ಕುರಿತು ಹೇಳುವರು ಹಾಗೂ ವಿ ತಾ ವಿ ಪಠ್ಯಕ್ರಮಕ್ಕನುಗುಣವಾಗಿ ವರ್ಚುವಲ್ ಲ್ಯಾಬ್ ಗಳನ್ನು ಅಭಿವೃದ್ದಿ ಪಡಿಸಲಿದ್ದು ಮುಂದಿನ ಪರಿಷ್ಕೃತ ಪಠ್ಯಕ್ರಮದಲ್ಲಿ ವರ್ಚುವಲ್ ಲ್ಯಾಬ್ ಗಳಲ್ಲಿನ ಪ್ರಯೋಗಗಳನ್ನು ಸೇರಿಸಲಾಗುವುದು ಎಂದು ವಿ ತಾ ವಿ ಕುಲಪತಿ ಪ್ರೊ ಕರಿಸಿದ್ದಪ್ಪ ಹೇಳಿದರು.

ಸಂದರ್ಭದಲ್ಲಿ  ವಿ ತಾ ವಿ ಅಧೀನದಲ್ಲಿರುವ ೧೯೦ ಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜ್ ಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button