ಪೌಷ್ಟಿಕ ಆಹಾರದೊಂದಿಗೆ ಗರ್ಭಿಣಿ, ಬಾಣಂತಿ ಹಾಗೂ ಮಗುವಿನ ಆರೋಗ್ಯ ರಕ್ಷಣೆ -ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಿಪ್ಪಾಣಿ ಇದರ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿ ಶಿಶು ಮತ್ತು ತಾಯಿಗೆ ೧,೦೦೦ ದಿನಗಳ ಕಾಲ ಉತ್ತಮ ಆಹಾರ ಪೌಷ್ಠಿಕ ಆಹಾರ ಸೇವನೆ ನೀಡುವುದು ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಠಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವನ್ನು ಆರೋಗ್ಯವಂತರನ್ನಾಗಿಸುವ ಮಹತ್ವಾಂಕ್ಷೆಯಿಂದ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ರಾಷ್ಟ್ರೀಯ ಪೋಷಣ ಅಭಿಯಾನ. ಈ ಅಭಿಯಾನದ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಿ, ಮುಖ್ಯಮಂತ್ರಿಗಳ ಕನಸಿನ ಕೂಸಾದ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಿ ನಂತರ ಪುಟ್ಟ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ , ಸಿಡಿಪಿಓ ಸುಮಿತ್ರಾ ಡಿ ಬಿ, ನಿರೂಪನಾ ಅಧಿಕಾರಿ ನವೀನಕುಮಾರ ತಾಪಂ ಸದಸ್ಯ ಅರುಣಾ ಪಾಟೀಲ ಗ್ರಾ ಪಂ ಅದ್ಯಕ್ಷ ದಿವ್ಯಾ ಸಾಂಗಾವೆ, ಪಿಡಿಓ ಬಿ ಜೆ ಮೀಟಗಾರ ಜಯಶ್ರೀ ಕಜಲಗಿ, ರಮೇಶ ಪಾಟೀಲ, ಪಾಂಡು ಪಾಟೀಲ, ಬಾಳು ಪಾಟೀಲ, ಅಂಗನವಾಡಿ ಮೇಲ್ವಿಚಾರಕರು, ಆಶಾ ಹಾಗೂ ಅಣಗನವಾಡಿ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ