ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಸವದತ್ತಿ ಬಳಿ ಈಗ ಸ್ವಲ್ಪ ಹೊತ್ತಿನ ಮೊದಲು ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವಿಗೀಡಾಗಿದ್ದಾರೆ.
ಬೊಲೆರೋ ಮತ್ತು ಟಾಟ್ ಏಸ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ್ದು ಮೃತರೆಲ್ಲ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಕಾರ್ಮಿಕರೆಂದು ಗೊತ್ತಾಗಿದೆ. ಧಾರವಾಡ ಮೊರಬದಲ್ಲಿ ಜಮೀನು ಕೆಲಸಕ್ಕೆ ಹೋಗಿ ವಾಪಸ್ಸಾಗುತ್ತಿದ್ದರು. ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಲ್ಲವ್ವ ಯಲ್ಲಪ್ಪ ಮುರಕಿಬಾವಿ (65), ಪಾರವ್ವ ಹುರಳಿ (35), ರುಕ್ಮವ್ವ ವಡಕಣ್ಣವರ್ (35), ಭೀಮವ್ವ ನರಿ, ಮಾರುತಿ ಪೂಜಾರಿ, ಶೆಟ್ಟಿ ಬೆನಕಟ್ಟಿ ಮೃತರು.
10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸ್ಥಳೀಯ ಹಾಗೂ ಹಿಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ