ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಡ್ರಗ್ಸ್ ಪೆಡ್ಲರ್ ಗೆ ರೆಸ್ಟೋರೆಂಟ್ ತೆರೆಯಲು ಹಣ ನೀಡಿದ್ದ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಯನ್ನು ಬೆಂಗಳೂರು ಇ.ಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಎನ್ ಸಿಬಿಯಿಂದ ಬಂಧನಕ್ಕೀಡಾಗಿದ್ದ ಡ್ರಗ್ಸ್ ಪೆಡ್ಲರ್ ಅನೂಪ್ ಮಹಮ್ಮದ್ ನೀಡಿದ ಮಾಹಿತಿ ಆಧರಿಸಿ ಬಿನೀಶ್ ಗೆ ಬೆಂಗಳೂರು ಇ.ಡಿ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿನೀಶ್ ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಅನೂಪ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ತೆರೆಯಲು ಬಿನೀಶ್ 50 ಲಕ್ಷ ಹಣ ನೀಡಿದ್ದರು. ಅಲ್ಲದೇ ಡ್ರಗ್ಸ್ ಪೆಡ್ಲರ್ ಆಗಿರುವ ಅನೂಪ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಇನ್ನು ಕೇರಳದ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಕೂಡ ಬಿನೀಶ್ ಹೆಸರು ಕೇಳಿಬಂದಿರುವುದರಿಂದ ಮಾಜಿ ಗೃಹ ಸಚಿವರ ಪುತ್ರನಿಗೆ ಇ.ಡಿ ಸಂಕಷ್ಟ ಶುರುವಾಗಿದೆ ಎನ್ನಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ