Latest

ಮೈಸೂರು ವಿವಿ ಘಟಿಕೋತ್ಸವದಲ್ಲಿ ಮೋದಿ; ಗೋರೂರು ರಾಮಸ್ವಾಮಿ ಸ್ಮರಿಸಿದ ಪ್ರಧಾನಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿ ಸಿಬ್ಬಂದಿಗಳಿಗೆ ಕನ್ನಡದಲ್ಲಿ ಶುಭಾಷಯ ಕೋರಿದರು.

ಮೈಸೂರು ವಿವಿ 100ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯ ಕೋರಿದರು. ಶಿಕ್ಷಣಕ್ಕೆ ಮಹತ್ವದ ಸ್ಥಳ ಮೈಸೂರು. ಪದವಿ ಪಡೆಯುತ್ತಿರುವ ಎಲ್ಲರಿಗೂ ಶುಭಾಷಯಗಳು ಎಂದರು. ಪ್ರಾಚೀನ ಭಾರತದ ಶಿಕ್ಷಣದ ಮಹತ್ವದ ಸ್ಥಳ ಮೈಸೂರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಕನಸು ಮೈಸೂರು ಎಂದರು.

ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿವಿಯ ಪದವಿ ಪಡೆದು ನಿಜ ಜೀವನಕ್ಕೆ ಕಾಲಿಡುತ್ತೀದ್ದೀರಿ. ಶಿಕ್ಷಣ ಜೀವನದ ಬೆಳಕಾಗಿದೆ ಎಂದು ಕನ್ನಡದ ಮಹಾನ್ ಲೇಖಕ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಹೇಳಿದ್ದರು ಎಂದು ತಿಳಿಸಿದರು.

Home add -Advt

Related Articles

Back to top button