Kannada NewsKarnataka NewsLatest

ಪಾಲಿಕೆ ಮೇಲೆ ಹಾರಾಡಿತು ಕನ್ನಡ ಧ್ವಜ; ನಗರದೆಲ್ಲೆಡೆ ಕನ್ನಡ ಸಂಭ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಲವು ದಶಕಗಳಿಂದ ವಿವಾದಕ್ಕೊಳಗಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ನಿನ್ನೆ ರಾತ್ರಿ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಕನ್ನಡ ಧ್ವಜ ಹಾರಿಸಿದ್ದಾರೆ.

2005ರಿಂದ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ತೊಟ್ಟಿದ್ದ ಕಸ್ತೂರಿ ಬಾವಿ, ಧ್ವಜ ಹಾರಿಸಿ ಸಾಹಸ ಪ್ರದರ್ಶಿಸಿದ್ದಾರೆ.

ಆದರೆ ಕೆಲವೇ ಸಮಯದಲ್ಲಿ ಪೊಲೀಸರು ಧ್ವಜ ಕೆಳಗಿಳಿಸಿದ್ದು, ಕಸ್ತೂರಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮೊದಲಿನಿಂದಲೂ ಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಟಕ್ಕೆ ಅವಕಾಶ ನೀಡಲಾಗಿಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ ಪಾಲಿಕೆ ಆಡಳಿತ ಹಿಡಿದಿದ್ದೇ ಹೆಚ್ಚು. ಆಗೆಲ್ಲ ಹಳೆಯ ಕಟ್ಟಡದಲ್ಲಿ ಎಂಇಎಸ್ ತನ್ನದೆಂದು ಕ್ಲೇಮ್ ಮಾಡಿಕೊಳ್ಳುವ ಭಗವಾಧ್ವಜ ಹಾರಾಡುತ್ತಿತ್ತು.

ಪಾಲಿಕೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾದಾಗ 2009ರಲ್ಲಿ ಭಗವಾಧ್ವಜವನ್ನು ಹಾಕಲು ಅವಕಾಶ ನೀಡಲಾಗಿಲ್ಲ. ಆಗ, ಆಗಿನ ಸಂಸದ ಸುರೇಶ ಅಂಗಡಿ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ, ಎಇಎಸ್ ಧ್ವಜ (ಭಗವಾಧ್ವಜವೆಂದು ವಾದಿಸಿ) ವನ್ನು ಹಿಡಿದು ಪಾಲಿಕೆಗೆ ನುಗ್ಗಿದ್ದರು.

ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಧ್ವಜ ಹಾರಿಸಲು ಅವಕಾಶ ನೀಡಲಾಗಿಲ್ಲ.

ಬೆಳಗಾವಿಯಲ್ಲಿ ಇಂದು ಕನ್ನಡ ಸಂಭ್ರಮ ಮುಗಿಲು ಮುಟ್ಟಿದೆ. ಕೊರೋನಾ ಹಿನ್ನೆಲೆಯಲ್ಲಿ ಮೆರವಣಿಗೆ ರದ್ಧುಪಡಿಸಲಾಗಿದ್ದರೂ ಉತ್ಸಾಹಿ ಕನ್ನಡಿಗರು ಅಲ್ಲಲ್ಲಿ ಮೆರವಣಿಗೆಯಲ್ಲಿ ತೊಡಗಿದ್ದಾರೆ.ಎಲ್ಲೆಡೆ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡಿದೆ.

ಎಂಇಎಸ್ ಕರಾಳ ದಿನಕ್ಕೆ ಪ್ರಯತ್ನಿಸಿತ್ತು. ಆದರೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ. ಆದಾಗ್ಯೂ ಎಂಇಎಸ್ ಮರಾಠಾ ಮಂದಿರದಲ್ಲಿ ಸಭೆ ನಡೆಸಿ, ಕರ್ನಾಟಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿಗೆ – ಸಚಿವ ಜಾರಕಿಹೊಳಿ

ಎಂಇಎಸ್ ಪುಂಡಾಟಕ್ಕೆ ಕನ್ನಡಪರ ಸಂಘಟನೆ ಆಕ್ರೋಶ; ಪ್ರತಿಭಟನಾಕಾರರ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button