ಸಿಹಿ ತಿಂಡಿ ಆಯ್ತು, ಈಗ ಖಾರದ ಸರದಿ

ಖಾರಾ ಕೇಕ್

ಹಬ್ಬದಲ್ಲಿ ಸಿಹಿ ಕಜ್ಜಾಯವನ್ನೇ ಮಾಡಿದ್ವಿ. ತುಂಬಾ ಮಂದಿ ಖಾರಾ ತಿಂಡಿ ಹೇಳಿಕೊಡಿ ಅಂತಾ ಕೇಳಿದ್ರಿ ನಿಮ್ಮೆಲ್ಲರ ಆಸೆಯಂತೆ ಸಹನಾಸ್ ಕಿಚನ್ ಖಾರಾ ಕೇಕ್ ಮಾಡುವುದು ಹೇಗಂತಾ ತಿಳಿಸಿಕೊಡ್ತಾ ಇದೆ.
ಮೈದಾ, ಓವನ್ ಯಾವುದು ಬೇಡಾ  ಸ್ವಲ್ಪನೇ ದೊಸೆಹಿಟ್ಟಿದ್ರೆ ಸಾಕು ಖಾರಾ ಕೇಕ್ ಮಾಡಲು.
ಬೇಕಾಗುವ ಸಾಮಗ್ರಿ:
4 ದೋಸೆಗೆ ಬೇಕಾಗುವಷ್ಟು ದೋಸೆ ಹಿಟ್ಟು, ಸ್ವಲ್ಪ ಅರಿಶಿಣ ಪುಡಿ, ಒಂದು ಟೀ ಚಮಚ ಇನೋ(Eno), 2-3 ಚಮಚ ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು.
ಕಡಲೆ ಚಟ್ನಿಪುಡಿ, ಕೊಬ್ಬರಿ ಚಟ್ನಿ  ಅಥವಾ ಹಸಿರು ಚಟ್ನಿ .
ಮಾಡುವ ವಿಧಾನ:
ದೋಸೆ ಹಿಟ್ಟಿಗೆ ಕಡಲೆಹಿಟ್ಟು, ಉಪ್ಪು ಮತ್ತು Eno ಸೇರಿಸಿ ಗಂಟಾಗದಂತೆ ಕಲಸಿ ಇಟ್ಟಿರಬೇಕು. ನೀರನ್ನು ಸೇರಿಸಬಾರದು.  ತಯಾರಿಸಿಟ್ಟ ಹಿಟ್ಟನ್ನು ಕೇಕ್ ಪಾತ್ರೆಗೆ ಹಾಕಿ ಹಬೆಯಲ್ಲಿ 15-20 ನಿಮಿಷ ಬೇಯಿಸಬೇಕು.
ತಣ್ಣಗಾದ ಮೇಲೆ  ಕೊಬ್ಬರಿ ಚಟ್ನಿ ಅಥವಾ ಹಸಿರು ಚಟ್ನಿಯನ್ನು ಕೇಕಿನಮೇಲೆ ಸವರ ಬೇಕು. ನಂತರ ಪುಡಿ ಚಟ್ನಿಯನ್ನು  ಕೇಕಿನ ಸುತ್ತಲು  ಹಚ್ಚಬೇಕು. ಖಾರಾ ಕೇಕ್ ಸವಿಯಲು ರೆಡಿ.
ಸೂಚನೆ: ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸನ್ನು ಸ್ವಲ್ಪ ಹುರಿದು ಅಲಂಕಾರಕ್ಕೆ ಬಳಸಬಹುದು.
(ಹಸಿರು ಚಟ್ನಿ:  ಕುತ್ತುಂಬ್ರಿಸೊಪ್ಪು  ಒಂದು ಕಟ್ಟು, ಹಸಿಮೆಣಸು 6-7, ಒಂದು ಲಿಂಬೆ ಹಣ್ಣಿನ ರಸ, 2-3 ಟೀ ಚಮಚ ಪುಟಾಣಿ,  ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಇಂಚು ಶುಂಠಿ  ಇವುಗಳನ್ನು ಸೇರಿಸಿ ಹಸಿದಾಗಿಯೇ ಸ್ವಲ್ಪ ನೀರು ಸೇರಿಸಿ  ರುಬ್ಬಿದರೆ ಹಸಿರು ಚಟ್ನಿ ರೆಡಿ)
– ಸಹನಾ ಭಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button