ಪ್ರಗತಿವಾಹಿನಿ ಸುದ್ದಿ; ಬಂಟ್ವಾಳ: ಇಡೀ ವಿಶ್ವದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸಂಸ್ಕೃತಿ ಯ ಬಗೆಗಿನ ಪ್ರಜ್ಞೆ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ತಾಲೂಕು ಅಭ್ಯಾಸವರ್ಗ-2020 ಸಿದ್ದಕಟ್ಟೆಯ ಹರ್ಷಲಿ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಎಬಿವಿಪಿ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕೆಲ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಕಂಬಳ ಓಟಗಾರಿಕೆಯ ಮೂಲಕ ಪ್ರಸಿದ್ಧಿ ಪಡೆದು ಕರ್ನಾಟಕದ ಪ್ರತಿಷ್ಟಿತ ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತ ಸುರೇಶ್ ಎಂ.ಶೆಟ್ಟಿ ಹಕ್ಕೇರಿ ಇವರನ್ನು ಸನ್ಮಾನಿಸಲಾಯಿತು. ಅಭ್ಯಾಸವರ್ಗದ ಪ್ರಥಮ ಅವಧಿ ಶಾಖೆ ಮತ್ತು ಸಂಚಾಲನವನ್ನು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ತೆಗೆದುಕೊಂಡರು. ಅಭ್ಯಾಸ ವರ್ಗದ ದ್ವಿತೀಯ ಅವಧಿ ಸೈದ್ದಾಂತಿಕ ಭೂಮಿಕೆ ಯನ್ನು ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ತೆಗೆದುಕೊಂಡರು. ಅಭ್ಯಾಸವರ್ಗದ ತೃತೀಯ ಅವಧಿಯನ್ನು ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಜೈನ್ ಕಾರ್ಕಳ ತೆಗೆದುಕೊಂಡರು. ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಹಾಗೂ ಸಿದ್ದಕಟ್ಟೆ ನಗರದ ನೂತನ ಕಾರ್ಯಕಾರಿಣಿಯನ್ನು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಘೋಷಿಸಿದರು. ಸಮಾರೋಪದಲ್ಲಿ ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು ,ಜಿಲ್ಲಾ ಸಂಚಾಲಕರಾದ ಸಂದೇಶ್ ರೈ ಮಜಕ್ಕಾರ್ ಉಪಸ್ಥಿತರಿದ್ದರು.
ಅಭ್ಯಾಸ ವರ್ಗದಲ್ಲಿ ಸಿದ್ದಕಟ್ಟೆ ಪರಿಸರದ ವಿದ್ಯಾರ್ಥಿ ಪರಿಷತ್ ನ ಹಿತೈಷಿಗಳಾದ ರತ್ನ ಕುಮಾರ್ ಚೌಟ, ಪ್ರಭಾಕರ ಪ್ರಭು, ಉಮೇಶ್ ಗೌಡ , ದೀಪಕ್ ಶೆಟ್ಟಿಗಾರ್, ಮಂದಾರತಿ , ಮಾಧವ ಶೆಟ್ಟಿಗಾರ್ , ವಿಶ್ವನಾಥ ಶೆಟ್ಟಿಗಾರ್ ,ಮಹೇಶ್ ಕರ್ಕೇರ ಸತೀಶ್ ಪೂಜಾರಿ ಅಳಕೆ,ರಾಜೇಶ್ ಕೊನೆರೊಟ್ಟು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ