Latest

ದಿ. ಪಂ. ಹಯವದನ ಜೋಶಿ ಸ್ಮರಣಾರ್ಥ ಫೆ.11 ರಂದು ಸ್ವರ ಶ್ರದ್ಧಾಂಜಲಿ 

ಹೆಸರಾಂತ ಕಲಾವಿದರಿಂದ ಸಂಗೀತದ ರಸದೌತಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಕೆಎಲ್‌ಇ ಸಂಸ್ಥೆಯ ಸಂಗೀತ ಮಹಾವಿದ್ಯಾಲಯದ ವತಿಯಿಂದ ದಿ. ಪಂ. ಹಯವದನ ಜೋಶಿ ಅವರ ಸ್ಮರಣಾರ್ಥ ೧೧ನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವು ಜೆಎನ್‌ಎಂಸಿ ಆವರಣದ ಕೆಎಲ್‌ಇ ಕನ್ವೆನ್ಷನ್ ಸೆಂಟರಿನಲ್ಲಿ ಫೆ.೧೧ ರಂದು ಸಂಜೆ ೫ ಗಂಟೆಗೆ ನಡೆಯಲಿದೆ.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೊಲ್ಹಾಪುರದ ಜೈಪುರ ಅತ್ರೋಲಿ ಘರಾಣೆಯ ಪ್ರಸಿದ್ಧ ಗಾಯಕಿ ಡಾ. ಭಾರತಿ ವೈಷಂಪಾಯನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಸಿಕೊಡಲಿದ್ದಾರೆ. ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿ ಕನ್ನಡ ಕಲರ್‍ಸ್ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ವಿಜೇತ  ಅನಿಮೇಶ ಹೆಗಡೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಇತ್ತೀಚೆಗೆ ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ವಿಜೇತ ಕೆಎಲ್‌ಇ ಸಂಗೀತ ವಿಭಾಗದ ವಿದ್ಯಾರ್ಥಿಗಳಾದ ಶ್ರೀವತ್ಸ, ಕಾಲಜ್ ಮತ್ತು ರಾಜಶ್ರೀ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾಹೇರ್ ಕುಲಪತಿಗ ಡಾ. ವಿವೇಕ ಸಾವಜಿ, ಕುಲಸಚಿವ ಡಾ. ವಿ.ಡಿ ಪಾಟೀಲ, ಡಾ. ರಾಜೇಂದ್ರ ಬಾಂಡನಕರ ಉಪಸ್ಥಿತರಿರುವರು ಎಂದು ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಸ್ನೇಹಾ ರಾಜೂರಿಕರ್ ಅವರು ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button