ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ)ದ ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.
ಜನವರಿ 2ರಿಂದ 5 ವರೆಗೆ ನಿಗದಿಯಾಗಿದ್ದ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಇದೀಗ ಮುಂದೂಡಿಕೆಯಾಗಿದೆ. ಕೆಪಿಎಸ್ ಸಿ ಹಾಗೂ ಯುಪಿಎಸ್ ಸಿ ಮುಖ್ಯ ಪರೀಕ್ಷೆಗಳು ಒಟ್ಟೊಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಮುಂದೂಡಲಾಗಿದೆ.
ಮೂಂದೂಡಿಕೆಯಾದ ದಿನಾಂಕ ಕೂಡ ಪ್ರಕಟವಾಗಿದ್ದು, ಫೆಬ್ರವರಿ 13ರಿಂದ 16ರವರೆಗೆ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ