ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗಾಗಿ ೨೧.೨೭ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಉದಗಟ್ಟಿಯಿಂದ ನಾಗನೂರ ವ್ಹಾಯಾ ವಡೇರಹಟ್ಟಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾಮಗಾರಿಗೆ ೫.೩೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.
ಅರಭಾವಿ ಮತಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪಿಎಂಜಿಎಸ್ವಾಯ್ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ೬.೧೯ ಕೋಟಿ ರೂ. ವೆಚ್ಚದಲ್ಲಿ ಮಲ್ಲಾಪೂರ ಪಿಜಿಯಿಂದ ಬಡಿಗವಾಡ ವ್ಹಾಯಾ ದುರದುಂಡಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ೯.೭೩ ಕೋಟಿ ರೂ. ವೆಚ್ಚದಲ್ಲಿ ಬೆಟಗೇರಿಯಿಂದ ಮೆಳವಂಕಿ ವ್ಹಾಯಾ ಉಪ್ಪಾರಹಟ್ಟಿ ರಸ್ತೆ ಕಾಮಗಾರಿಯೂ ಸಹ ಪ್ರಗತಿ ಹಂತದಲ್ಲಿದೆ. ರಸ್ತೆಗಳ ಸುಧಾರಣೆಗಾಗಿ ಪಿಎಂಜಿಎಸ್ವಾಯ್ ಅಡಿಯಲ್ಲಿ ೨೧.೨೭ ಕೋಟಿ ರೂ. ಅನುದಾನ ಬಂದಿದೆ ಎಂದು ಅವರು ಹೇಳಿದರು.
ಜನರ ಮೂಲ ಸೌಕರ್ಯಗಳನ್ನು ನೀಗಿಸಲು ಪ್ರಾಮಾಣ ಕ ಪ್ರಯತ್ನ ಮಾಡಲಾಗುತ್ತಿದೆ. ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಕಾಮಗಾರಿಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಕೋವಿಡ್-೧೯ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬವಾಗುತ್ತಿದ್ದರೂ ಸಹ ಅವುಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ಸಾರ್ವಜನಿಕ ಸಂಚಾರಕ್ಕೆ ಯಾವುದೇ ಅಡಚಣೆ ಬಾರದಂತೆ ಕೆಲಸ ನಿರ್ವಹಿಸಿ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಕೀಲ ಮುತ್ತೆಪ್ಪ ಕುಳ್ಳೂರ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ, ತಾಪಂ ಸದಸ್ಯ ಗೋಪಾಲ ಕುದರಿ, ಹನಮಂತ ಕೊಪ್ಪದ, ಪರಸಪ್ಪ ಸಾರಾಪೂರ, ಮಲಕಾರಿ ವಡೇರ, ಬನಪ್ಪ ವಡೇರ, ರಂಗಪ್ಪ ಛಪ್ರಿ, ರುದ್ರಗೌಡ ಪಾಟೀಲ, ವಿಠ್ಠಲ ಗಿಡೋಜಿ, ರಾಜು ಬಳಿಗಾರ, ಅಡಿವೆಪ್ಪ ಹಾದಿಮನಿ, ಪಾಂಡು ದೊಡಮನಿ, ಶಿದ್ಲಿಂಗ ಗಿಡೋಜಿ, ಚಂದ್ರು ಮೋಟೆಪ್ಪಗೋಳ, ರೆಬ್ಬೋಜಿ ಮಳಿವಡೇರ, ಗೋಪಾಲ ಬೀರನಗಡ್ಡಿ, ಮಾರುತಿ ಮದ್ರಾಸಿ, ಉದಗಟ್ಟಿ-ವಡೇರಹಟ್ಟಿ ಗ್ರಾಮಗಳ ಮುಖಂಡರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ : ಮೂಡಲಗಿ ೧ : ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಡೇರಹಟ್ಟಿ ಗ್ರಾಮದಲ್ಲಿ ಪಿಎಂಜಿಎಸ್ವಾಯ್ ಯೋಜನೆಯಡಿ ಮಂಜೂರಾಗಿರುವ ಉದಗಟ್ಟಿ-ನಾಗನೂರ-ವಡೇರಹಟ್ಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ