Latest

ಸರಕಾರಕ್ಕೆ ಭಾನುವಾರ 2 ಜಾತಿಗಳಿಂದ ಥ್ರೆಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾನುವಾರ 2 ಜಾತಿಗಳ ಮುಖಂಡರು ಸರಕಾರಕ್ಕೆ ಬೆದರಿಕೆ ಹಾಕಿವೆ. ಕುರುಬ ಸಮಾಜದವರನ್ನು ಮಂತ್ರಿ ಮಾಡದಿದ್ದರೆ ಸರಕಾರ ಬೀಳಲಿದೆ ಎಂದು ಕುರುಬ ಸಮಾಜದ ಸಿದ್ದರಾಮಾನಂದ ಸ್ವಾಮಿಗಳು ಎಚ್ಚರಿಕೆ ನೀಡಿದರೆ, ಮರಾಠಾ ಸಮಾಜವನ್ನು 2ಎ ಮೀಸಲಾತಿಗೆ ಒಳಪಡಿಸದಿದ್ದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಶಾಸಕಿ ಅಂಜಲಿ ನಿಂಬಾಳಕರ್ ಬೆದರಿಕೆ ಹಾಕಿದ್ದಾರೆ.

ಧಾರವಾಡದಲ್ಲಿ ಮರಾಠಾ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅಂಜಲಿ ನಿಂಬಾಳಕರ್, ಉಪಚುನಾವಣೆ ಗಿಮಿಕ್ ಗಾಗಿ ನಮಗೆ ಮರಾಠಾ ಅಭಿವೃದ್ಧಿ ನಗಮ ಘೋಷಿಸಿ 50 ಕೋಟಿ ರೂ. ನೀಡಿದ್ದಾರೆ. ನಮಗೆ ಈ ನಿಗಮ ಬೇಕಾಗಿಲ್ಲ. ನಮ್ಮ ಸಮಾಜವನ್ನು 7 ದಿನಗಳೊಳಗಾಗಿ 2 ಎ ಮೀಸಲಾತಿಗೆ ಒಳಪಡಿಸಲಿ. ಇಲ್ಲವಾದಲ್ಲಿ ಬರಲಿರುವ ಎಲ್ಲ ಉಪಚುನಾವಣೆ ಮತ್ತು ಗ್ರಾಮಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕೇವಲ ಉಪಚುನಾವಣೆಗೋಸ್ಕರ ಮರಾಠಾ ಅಭಿವೃದ್ಧಿ ನಿಗಮದ ಟಿಪ್ಪಣಿ ಹೊರಡಿಸಲಾಗಿದೆ. ಇದಕ್ಕೆ ಅಧಿಕೃತ ಆದೇಶವಾಗಿಲ್ಲ. ಚುನಾವಣೆ ಬಳಿಕ ಇದು ಏನಾಗಿದೆ ಗೊತ್ತಿಲ್ಲ ಎಂದರು.

ದಾವಣಗೆರೆಯಲ್ಲಿ ಮಾತನಾಡಿದ ಕುರುಬ ಸಮಾಜದ ಸಿದ್ದರಾಮಾನಂದ ಸ್ವಾಮೀಜಿ, ಕುರುಬರ ಋಣ ಈ ಸರಕಾರದ ಮೇಲಿದೆ. ನಮ್ಮ ಸಮಾಜಕ್ಕೆ ಸಂಪುಟದಲ್ಲಿ ಪ್ರಾತಿನಿದ್ಯ ನೀಡದಿದ್ದರೆ ಸರಕಾರ ಉಳಿಯದು ಎಂದು ಎಚ್ಚರಿಕೆ ನೀಡಿದ್ದಾರೆ.

ಮರಾಠಾ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಎಂದ ಶಾಸಕಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button