Latest

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಗಾಂಧಿನಗರ: 14 ವರ್ಷದ ಮಗಳ ಮೇಲೆಯೇ ತಂದೆಯೊಬ್ಬ 9 ತಿಂಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವ ಘೋರ ಘಟನೆ ಗುಜರಾತ್ ನ ವಡೋದರಾ ಜಿಲ್ಲೆಯಲ್ಲಿ ನಡೆದಿದೆ.

38 ವರ್ಷದ ಆಟೋ ಡ್ರೈವರ್ ತನ್ನ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ಪತ್ನಿಯ ಮುಂದೆಯೇ ಈ ಕೃತ್ಯ ನಡೆಸಿರುವ ವಿಕೃತಕಾಮಿ, ಪತ್ನಿ ಹಾಗೂ ಮಕ್ಕಳು ವಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.

ತಾಯಿಯ ಜೊತೆಗೂಡಿ ಮಗಳು ತಂದೆಯ ವಿರುದ್ಧ ಭದರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Home add -Advt

Related Articles

Back to top button