ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಆನ್ ಲೈನ್ ಶಿಕ್ಷಣಕ್ಕಾಗಿ ಮಗಳು ಅಪ್ಪನ ಮೊಬೈಲ್ ಪಡೆದುಕೊಂಡಿದ್ದ ವೇಳೆ ಅಪ್ಪನ ರಾಸಲೀಲೆ ವಿಡಿಯೋ ಕಂಡು ಮಗಳು ಶಾಕ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗೆನವಲಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಗಳು ತನ್ನ ಆನ್ ಲೈನ್ ಕ್ಲಾಸ್ ಗಾಗಿ ಅಪ್ಪನಿಂದ ಮೊಬೈಲ್ ಪಡೆದುಕೊಂಡಿದ್ದಾಳೆ. ಮೊಬೈಲ್ ಓಪನ್ ಮಾಡಿ ನೋಡಿದಾಗ ಅಪ್ಪನ ಅಕ್ರಮ ಸಂಬಂಧದ ವಿಡಿಯೋ ಬಯಲಾಗಿದೆ. ವಿಡಿಯೋವನ್ನು ಮಗಳು ಅಮ್ಮನಿಗೆ ತೋರಿಸಿದ್ದಾಳೆ.
ಪತಿಯ ವಿರುದ್ಧ ರೊಚ್ಚಿಗೆದ್ದ ಪತ್ನಿ ನಾಗಮಂಗಲ ಠಾಣೆ ಮೆಟ್ಟಿಲೇರಿದ್ದು, ತನಗೆ ನ್ಯಾಯ ಕೊಡಿಸುವಂತೆ ಕೋರಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ