ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಅಗ್ರಗಣ್ಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಮುರುಗೆಯ್ಯಾ ಗುರುಪಾದಯ್ಯಾ ವಾಚೇದಮಠ ಹುಬ್ಬಳ್ಳಿಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
೧೯೫೮ ರಲ್ಲಿ ಮುಂಬಯಿಯ ನೂತನ ಕಲಾ ಮಂದಿರದಿಂದ ಡಿಪ್ಲೋಮಾ ಹಾಗೂ ಆರ್ಟ್ ಮಾಸ್ಟರ್ ಪದವಿ ಪಡೆದುಕೊಂಡಿದ್ದ ಅವರು ೧೯೫೬ ರಿಂದ ಸವದತ್ತಿ, ಅಥಣಿ ಹಾಗೂ ಧಾರವಾಡಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ನಿವೃತ್ತರಾಗಿದ್ದರು.
ಎಂ.ಜಿ.ವಾಚೇದಮಠ ಅವರು ರಾಜ್ಯಾದ್ಯಂತ ಹಲವಾರು ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿ, ಕಲಾರಸಿಕರ ಮೆಚ್ಚುಗೆ ಪಾತ್ರರಾಗಿದ್ದರು. ೧೯೯೯ ರಲ್ಲಿ ಕರ್ನಾಟಕ ಲಲಿತ ಕಲಾ ಅಕೆಡೆಮಿ ಗೌರವ ಪ್ರಶಸ್ತಿ ಹಾಗೂ ಇತ್ತೀಚಿಗೆ ೨೦೨೦ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.
ಎಂ.ಜಿ.ವಾಚೇದಮಠ ಅವರು ನಿಧನರಾಗಿರುವುದು ನಾಡಿಗೆ ಹಾಗೂ ಚಿತ್ರಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತೀವ್ರಶೋಕ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ