Latest

ಎಸ್ ಎಸ್ ಎಲ್ ಸಿ, ಪಿಯುಸಿ ಆರಂಭಕ್ಕೆ ಸರಕಾರ ನಿರ್ಧಾರ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆಗಳನ್ನು ಪಾನಾರಂಭಿಸುವ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ಮಹತ್ವದ ಸಭೆ ನಡೆಯಲಿದೆ.

ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವರದಿಗಳನ್ನು ಆಧರಿಸಿ ಸರಕಾರ ಶಾಲೆಗಳ ಆರಂಭ ಕುರಿತು ನಿರ್ಧಾರ ಪ್ರಕಟಿಸಬಹುದು.

ಸಧ್ಯಕ್ಕೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ತರಗತಿಗಳನ್ನು ಮಾತ್ರ ಆರಂಭಿಸುವ ಸಾಧ್ಯತೆ ಇದೆ. 1 ರಿಂದ 8ನೇ ತರಗತಿವರೆಗೆ ಈ ವರ್ಷ ಆರಂಭಿಸುವ ಸಾಧ್ಯತೆ ಕ್ಷೀಣ. 9ನೇ ತರಗತಿ ಆರಂಭದ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲವಿದೆ.

ಜನೆವರಿ 1ರಿಂದ ವಿದ್ಯಾಗಮವನ್ನು ಹೊಸ ರೀತಿಯಲ್ಲಿ ಆರಂಭಿಸಲು ಸರಕಾರ ಈಗಾಗಲೆ ನಿರ್ಧರಿಸಿದೆ. ಜೊತೆಗೆ ಶೀಘ್ರವೇ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳ ದಿನಾಂಕ ಪ್ರಕಟಿಸುವುದಾಗಿಯೂ ಶಿಕ್ಷಣ ಸಚಿವ ಸುರೇಶ ಕುಮಾರ ಈಗಾಗಲೆ ತಿಳಿಸಿದ್ದಾರೆ. ಹಾಗಾಗಿ ಈಗ ಶಾಲೆಗಳನ್ನು ಪ್ರಾರಂಭಿಸಿದರೂ ಕೇವಲ ಔಪಚಾರಿಕ ವ್ಯವಸ್ಥೆ ಮಾತ್ರ ಆಗಲಿದೆ. ಪರಿಪೂರ್ಣವಾಗಿ ಶಾಲೆಗಳ ಆರಂಭ ಇನ್ನೇನಿದ್ದರೂ ಜೂನ್ ತಿಂಗಳ ನಂತರವೇ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button