ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಯುವಕನೊಬ್ಬ ಹಾಡ ಹಗಲೇ ಯುವತಿಯ ಮೇಲೆ ತಲ್ವಾರ್ ನಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ಪಾಗಲ್ ಪ್ರೇಮಿ ಕುಂದಗೋಳ ರಾಮನು ಗ್ರಾಮದ ನಿವಾಸಿ, ಧಾರವಾಡದ ಮೊರಬ ಗ್ರಾಮದ ಯುವತಿಯ ಮೇಲೆ ರಸ್ತೆ ಮಧ್ಯೆಯೇ ದಾಳಿ ನಡೆಸಿ, ನಾಲ್ಕು ಬಾರಿ ತಲ್ವಾರ್ ನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿ ರಕ್ಷಣೆಗಾಗಿ ಕಿರುಚುತ್ತಾ ಕುಸಿದು ಬಿದ್ದಿದ್ದಾಳೆ.
ಸ್ಥಳೀಯರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಉಪನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ