ಪ್ರಗತಿವಾಹಿನಿ ಸುದ್ದಿ; ಮುಂಬೈ: ನಾಲ್ಕು ವರ್ಷದ ಬಾಲಕಿಯ ಮೇಲೆ ಬಸ್ ಚಾಲಕನೊಬ್ಬ ಅತ್ಯಾಚಾರವೆಸಗಿ, ಬಳಿಕ ಬಾಲಕಿಯನ್ನು ಗೋಣಿ ಚೀಲದಲ್ಲಿ ತುಂಬಿ ಮುಂಬೈ-ಅಹ್ಮದಾಬಾದ್ ಹೆದ್ದಾರಿ ಬಳಿಯ ಪೆಟ್ರೋಲ್ ಬಂಕ್ ಬಳಿ ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮಾರನೆ ದಿನ ಬೆಳಿಗ್ಗೆ ಗೋಣಿ ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹತ್ತಿರ ಬಂದು ಪರಿಶೀಲಿಸಿದಾಗ ಅದರಲ್ಲಿ ಬಾಲಕಿ ಇರುವುದು ಕಂಡು ದಂಗಾಗಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಾರ್ಕ್ ಮಾಡಿದ್ದ ಲಕ್ಸುರಿ ಬಸ್ ಬಳಿ ಬಾಲಕಿ ಇತರ ಮಕ್ಕಳ ಜೊತೆ ಆಟವಾಡುತ್ತಿದ್ದಳು. ಆಟವಾಡುತ್ತಾ ಮಕ್ಕಳು ಬಸ್ ನಲ್ಲಿ ಹತ್ತುವುದು ಇಳಿಯುವುದು ಮಾಡಿದ್ದಾರೆ. ಈ ವೇಳೆ ಬಾಲಕಿಯೊಬ್ಬಳನ್ನೇ ಬಿಟ್ಟು ಉಳಿದ ಮಕ್ಕಳು ಬಸ್ ಇಳಿದಿದ್ದಾರೆ. ಈ ವೇಳೆ ಬಸ್ ಚಾಲಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಯಾಚಾರವೆಸಗಿ ಗೋಣಿಚೀಲದಲ್ಲಿ ತುಂಬಿ ಬಿಸಾಕಿದ್ದಾನೆ. ಸಿಸಿಟಿವಿ ಮೂಲಕ ಆರೋಪಿ ಪತ್ತೆ ಹಚ್ಚಿರುವ ಪೊಲೀಸರು ಬಸ್ ಚಾಲಕನನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ