ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಟೆಕ್ಕಿ ಪತಿ ಮಹಾಶಯನೊಬ್ಬ ಫಸ್ಟ್ ನೈಟ್ ದಿನವೇ ಪತ್ನಿಗೆ ಮತ್ತುಬರುವ ಇಂಜಕ್ಷನ್ ನೀಡಿ, ಬ್ಲೇಡ್ ನಿಂದ ಕುಯ್ದು ಚಿತ್ರಹಿಂಸೆ ನೀಡಿ ವಿಕೃತಿ ಮೆರೆದು ಆನಂದಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಗುಂಟೂರು ಮೂಲದ ಯುವತಿ, ಹೈದರಾಬಾದ್ ನಲ್ಲಿ ಟೆಕ್ಕಿಯಾಗಿರುವ ಪ್ರಕಾಶಂ ಜಿಲ್ಲೆಯ ಯುವಕನನ್ನು ವಿವಾಹವಾಗಿದ್ದಳು. ಮೊದಲ ರಾತ್ರಿಯೇ ಪತಿ ಸೈಕೋನಂತೆ ವರ್ತಿಸಲು ಆರಂಭಿಸಿದ್ದಾನೆ. ಅರವಳಿಕೆ ಇಂಜಕ್ಷನ್ ಕೊಟ್ಟು, ಪತ್ನಿಗೆ ಬ್ಲೇಡ್ ನಿಂದ ಕುಯ್ದಿದ್ದಾನೆ. ಪತಿಯ ವಿಚಿತ್ರ ವರ್ತನೆಕಂಡು ಬೆದರಿದ ಪತ್ನಿ, ಒಂದೆರಡು ದಿನ ಸುಮ್ಮನಾಗಿದ್ದಾಳೆ. ಸರಿ ಹೋಗಬಹುದು ಎಂದು ಕಾದಿದ್ದಾಳೆ. ಆದರೆ ಆತನ ವಿಕೃತಿ ವಿಪರೀತವಾದಾಗ ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ.
ಎರಡೂ ಕುಟುಂಬದ ನಡುವೆ ಜಗಳವಾಗಿ ಪ್ರಕರಣ ಗುಂಟುರು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನಿಖೆಗೆ ಆದೇಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ