Kannada NewsKarnataka News

ಹುಕ್ಕೇರಿ ಹಿರೇಮಠದಲ್ಲಿ ಸುವಿಚಾರ ಚಿಂತನ ಪುನಾರಂಭ

ಪ್ರಗತಿವಾಹಿನಿ  ಸುದ್ದಿ, ಬೆಳಗಾವಿ – ಕಳೆದ 9 ತಿಂಗಳಿನಿಂದ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುವಿಚಾರ ಚಿಂತನಕ್ಕೆ ಕಡಿವಾಣ ಹಾಕಲಾಗಿತ್ತು. ತಿಂಗಳ ಮೊದಲ ರವಿವಾರ  ನಗರದ ಹುಕ್ಕೇರಿ ಹಿರೇಮಠದಲ್ಲಿ ನಡೆಯುವ ಈ ಸುವಿಚಾರ ಚಿಂತನದಲ್ಲಿ ಜಗದ್ಗುರು ಪಂಚಪೀಠಾಧೀಶ್ವರರ ಅನೇಕ ವಿರಕ್ತ ಮಠಾಧೀಶರು ಅದ್ವೈತ ಪರಂಪರೆಯ ಮಠಾಧೀಶರು ಅಷ್ಟೇ ಏಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇರಿದಂತೆ ಸಾಹಿತಿಗಳು ಕವಿಗಳು ಕಲಾವಿದರು ಭಾಗವಹಿಸಿ ಸುವಿಚಾರ ಚಿಂತನ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿದ್ದಾರೆ.

೩೮ನೇ ವಿಚಾರ ಚಿಂತನದಲ್ಲಿ ಭಾಗವಹಿಸಿ ಸದಲಗಾ ಚಿಕ್ಕೋಡಿ ಮತಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿ ಭಾಗವಹಿಸಿದ್ದರು. ಅವರು ಮಾತನಾಡುತ್ತಾ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಎಲ್ಲರನ್ನು ಬೆಳೆಸಿದ್ದಾರೆ. ನಾನು ಜಿಲ್ಲಾ ಪಂಚಾಯತಿ ಸದಸ್ಯ ಆಗುವುದಕ್ಕಿಂತ ಮುಂಚೆಯಿಂದಲೂ ಗುರುಗಳು ನನಗೆ ಆಶೀರ್ವಾದ ಮಾಡಿದ್ದಾರೆ. ಶ್ರೀಗಳು ಕನಸು ಕಟ್ಟಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯ ನೂತನ ಕಟ್ಟಡವನ್ನು ನಾವೆಲ್ಲರೂ ಕೂಡಿ ಕಟ್ಟೋಣ ಎಂದರು.

ಸವದತ್ತಿ ಹಿರೇಮಠದ ನೆರೆಗಲ್ ಶ್ರೀ ಷ ಬ್ರ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು  ಮಾತನಾಡಿದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಕುರಿತು ವಿವರಿಸಿದರು. ಬೆಳಗಿನಿಂದ ಸಂಜೆಯವರೆಗೆ  ಶ್ರೀಗಳು ಭಕ್ತರಿಗೆ ಲಿಂಗ ದೀಕ್ಷೆ, ಜಂಗಮರಿಗೆ ಅಯ್ಯಾಚಾರ ಕಾರ್ಯಕ್ರಮವನ್ನು ನೆರವೇರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button