Latest

ವಾಹನ ಚಾಲಕರಿಂದ ಒಂದೇ ದಿನ1.65 ಲಕ್ಷ ರೂ. ದಂಡ ವಸೂಲಿ

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಶಿರಸಿ ಉಪವಿಭಾಗದ ಡಿವೈಸ್ಪಿ ರವಿ ಡಿ ನಾಯ್ಕರವರ ನೇತೃತ್ವದಲ್ಲಿ ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ತಾಲುಕಿನ ಎಲ್ಲಾ ಠಾಣೆಗಳಲ್ಲಿ ಸಿಪಿಐ ಪಿಎಸ್ಐ ಹೆಚ್.ಆರ್.ಪಿ ಹಾಗು ಇಂಟರ್ಸೆಪ್ಟರ್ ಸಿಬ್ಬಂದಿ ಶುಕ್ರವಾರ ಕಾರ್ಯಚರಣೆ ಮಾಡಿ ಹೆಲ್ಮೆಟ್ ಇಲ್ಲದೆ, ಡಿ.ಎಲ್ ಇಲ್ಲದೆ ವಾಹನ ಚಾಲನೆ ಹಾಗು ಇತರೆ ಇಂಡಿಯನ್ ಮೋಟಾರು ವಾಹನ ಕಾಯ್ದೆ ಅಡಿ ಉಲಂಘನೆ ಮಾಡಿದವರನ್ನು ಹಿಡಿದು ದಂಡ ವಿಧಿಸಲಾಯಿತು.
ಒಟ್ಟು ಶಿರಸಿ ಉಪವಿಭಾಗದಲ್ಲಿ 331 ಲಘು ಪ್ರಕರಣ ದಾಖಲಿಸಿ ರೂ:1,65,000/- ದಂಡ ವಿಧಿಸಲಾಯಿತು. ಶಿರಸಿಯೊಂದರಲ್ಲೇ 200ಕ್ಕೂ ಹೆಚ್ಚು ಜನರಿಗೆ ಬಿಸಿ ಮುಟ್ಟಿಸಲಾಗಿದೆ.
ದಂಡ ವಿದಿಸಿದ ಸವಾರರ ವಾಹನ ಚಾಲನಾ ಪರವಾನಗಿ ಅಮಾನತ್ತು ಮಾಡಲು ಆರ್.ಟಿ.ಒ ರವರಿಗೆ ವರದಿ ಸಲ್ಲಿಸಲಾಯಿತು. ವಾಹನ ಅಪಘಾತ ತಡೆಯಲು ಈಗಾಗಲೇ ಅರಿವು, ಜಾಗೃತಿ ಕಾರ್ಯಕ್ರಮ ಮಾಡಿದ್ದು ಸಹ ಸಂಚಾರಿ ನಿಯಮ ಉಲಂಘನೆ ಮಾಡಿದವರ ಮೇಲೆ ಈ ಕ್ರಮ ಜರುಗಿಸಲಾಗಿದ್ದು ಈ ಕಾರ್ಯಾಚರಣೆ ಮುಂದೆಯು ಮುಂದುವರಿಯುತ್ತದೆ ಎಂದು ಡಿವೈಎಸ್ಪಿ ರವಿ.ಡಿ.ನಾಯ್ಕ ತಿಳಿಸಿದ್ದಾರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button