ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಗಳಗತಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲ್ಜಿಗೆ ಹೆಚ್ಚುವರಿ ತರಬೇತಿ ಕೊಠಡಿಗಳ ನಿರ್ಮಾಣಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ನಿಪ್ಪಾಣಿ ಮತಕ್ಷೇತ್ರದಲ್ಲಿನ ಬಡ ಮಕ್ಕಳಿಗೆ ಉನ್ನತ ಶಿಕ್ಷಣದ ಲಾಭ ಸಿಗಲು ಗಳಗತಾ ಹಾಗೂ ಬೋರಗಾಂವ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳಿದ್ದು, ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿ ಬೋರಗಾಂವ ಹಾಗೂ ಗಳಗತಾ ಕಾಲೇಜಿಗೆ ಹೆಚ್ಚುವರಿ ತರಬೇತಿ ಕೊಠಡಿಗಳು ಹಾಗೂ ಶೌಚಾಲಯ ನಿರ್ಮಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 1 ಕೋಟಿ ರೂ ಅನುದಾನ ಮಂಜೂರಾಗಿರುವುದಾಗಿ ಸಚಿವರು ತಿಳಿಸಿದರು.
ಗಡಿಭಾಗದಲ್ಲಿ ಗ್ರಾಮೀಣ ಭಾಗ ಹೆಚ್ಚಾಗಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಲಾಭ ಸಿಗಲೆಂದು ಪ್ರಯತ್ನಿಸಲಾಗುತ್ತಿದೆ. ಗಳಗತಾ ಗ್ರಾಮದ ಕಾಲೇಜಿನಲ್ಲಿ ಗಳಗತಾ, ಬೇಡಕಿಹಾಳ, ನೇಜ, ಭಿಮಾಪುವಾಡಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ತರಬೇತಿ ಕೊಠಡಿಗಳ ತೊಂದರೆ ಇತ್ತು. ಸರಿಯಾಗಿ ಶೌಚಾಲಯಗಳು ಇರಲಿಲ್ಲ. ಸಮಸ್ಯೆಗೆ ಸ್ಪಂಧಿಸಿ 4 ಕ್ಲಾಸ್ ರೂಮ್, 2 ಶೌಚಾಲಯ ನಿರ್ಮಾಣಕ್ಕೆ 1 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ