ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜಗರಣಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಪೂಜಾ ಕಾರ್ಯಕ್ರಮಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜಾ ವಿಧಿ ವಿಧಾನಗಳ ಮೂಲಕ ಚಾಲನೆಯನ್ನು ನೀಡಿದರು.
ದೇವಸ್ಥಾನಗಳು ಊರಿನ ಪ್ರಮುಖ ಕೇಂದ್ರಬಿಂದುಗಳಾಗಿದ್ದು, ಎಲ್ಲರಿಗೂ ಸನ್ಮಾರ್ಗ ಕರುಣಿಸುವ ಹಾಗೂ ಸಾತ್ವಿಕ ಸಮಾಜ ನಿರ್ಮಾಣದ ಶಕ್ತಿ ಕೇಂದ್ರಗಳಾಗಿವೆ. ನಮಗೆ ಒಳ್ಳೆಯ ಸಂಸ್ಕಾರ ಕಲಿಸುವುದರೊಂದಿಗೆ ಆಧ್ಯಾತ್ಮಿಕ ಬದುಕನ್ನು ತೋರಿಸುತ್ತವೆ ಎಂದು ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದ ಜನರ ಬೇಡಿಕೆ, ಮಾರ್ಗದರ್ಶನದಂತೆ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಯಾರಿಗೂ ಅನ್ಯಾಯವಾಗಿಲ್ಲ, ಆಗಲು ಬಿಡುವುದಿಲ್ಲ. ಇಡೀ ಕ್ಷೇತ್ರವನ್ನು ನನ್ನ ಕುಟುಂಬ ಎಂದು ಪರಿಗಣಿಸಿದ್ದೇನೆ. ಜನರೂ ನನ್ನನ್ನು ತಮ್ಮ ಮನೆ ಮಗಳೆನ್ನುವಂತೆ ಕಾಣುತ್ತಿದ್ದಾರೆ. ಪರಸ್ಪರ ಈ ಪ್ರೀತಿ- ವಿಶ್ವಾಸ ಶಾಶ್ವತವಾಗಿ ಮುಂದುವರಿಯಲಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಸ್ಲ್ಯಾಬ್ ಪೂಜೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸುಧೀರ್ ಗಡ್ಡೆ, ಅರುಣ ಕಟಾಂಬಳೆ, ಬೆಳವತ್ಕರ್, ಮನು, ಬೆಳವತ್ಕರ್, ರಾಜು ಚೌಗುಲೆ, ಪುಂಡಲೀಕ್ ತಾರಿಹಾಳಕರ್, ಶಿವಾಜಿ ಬೆಟಗೇರಕರ್, ದಶರಥ ಸೂರ್ಯವಂಶಿ, ಅಪ್ಪಾ ಜಾಧವ್, ಎಸ್ ಆರ್ ಮೋರೆ, ಶಾಂತಿನಾಥ ಬೋಗಾರ್, ಅಶೋಕ ಶಿರೋಳೆ, ವಿಠ್ಠಲ ಮೋರೆ, ಪುಂಡಲಿಕ್ ಜಾಧವ್, ಆನಂದ ಜಾಧವ್, ರಾಜು ಮುಂಚಡ್ಡಿಕರ್, ಬಾಹು ದೇಸುರಕರ್, ಭಜರಂಗ ಪಾಟೀಲ, ಸಂದೀಪ ಅಸ್ಟೇಕರ್, ಗ್ರಾಮದ ಮಹಿಳೆಯರು, ದೇವಸ್ಥಾನದ ಕಮೀಟಿಯವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ