Latest

ಪೊಲೀಸರ ಮೇಲೆ ಪ್ರತಿಕಾರಕ್ಕೆ ಸಂಚು; ಮಾಯಾ ಗ್ಯಾಂಗ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಸೇದು ತೀರಿಸಿಕೊಳ್ಳಲು ಮುಂದಾಗಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ.

ಮಾಯಾ ಗ್ಯಾಂಗ್ ಹೆಸರಲ್ಲಿ ಪೊಲೀಸರ ಮೇಲೆ ಪ್ರತಿಕಾರಕ್ಕಾಗಿ ಸ್ಕೆಚ್ ಹಾಕಿದ್ದ 6 ಆರೋಪಿಗಳನ್ನು ಬಂಧಿಸಿದ್ದಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಅನೀಶ್ ಅಶ್ರಫ್ (22), ಅಬ್ದುಲ್ ಖಾದರ್ (23), ಶೇಖ್ ಮೊಹಮ್ಮದ್ ಹ್ಯಾರಿಸ್ (31), ಚೂಟು ರಾಹಿಲ್ (18), ಮೊಹಮ್ಮದ್ ಖಾಯಿಸ್ (24), ಮೊಹಮ್ಮದ್ ನವಾಜ್ (30) ಬಂಧಿತರು.

Home add -Advt

2019 ಡಿಸೆಂಬರ್ 19ರಂದು ಸಿಎಎ, ಎನ್ ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕೆಲವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಇದಕ್ಕೆ ಒಂದು ವರ್ಷದಲ್ಲಿ ಪೊಲೀಸರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಲಾಗಿತ್ತು.

Related Articles

Back to top button