Kannada NewsKarnataka NewsLatest

ಮೀಟರ್ ಬಡ್ಡಿ: ತರಕಾರಿ ವ್ಯಾಪಾರಿಗೆ ಜೀವ ಬೆದರಿಕೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮೀಟರ್ ಬಡ್ಡಿಕುಳವೊಂದರ ಜೀವಬೆದರಿಕೆಯಿಂದ ಕಾಯಿಪಲ್ಲೆ ವ್ಯಾಪಾರಿಯೋರ್ವರು ಕುಂದಾನಗರಿಯ ಮಾರುಕಟ್ಟೆ ಠಾಣೆಯ ಮೊರೆ ಹೋಗಿದ್ದಾರೆ.
ಇಲ್ಲಿನ ಎಪಿಎಂಸಿ ಮಾರ್ಕೆಟ್ ಯಾರ್ಡನಲ್ಲಿ ತರಕಾರಿ ವ್ಯಾಪಾರ ಮಾಡುವ ಇರ್ಫಾನ್ ಬಶೀರ್ ಅಹ್ಮದ ಭಾಗವಾನ ಎಂಬುವವರೇ ನಾನಾವಾಡಿಯ ಸಂತೋಷ ಚಂದನಮಲ್ ಪಾರಮಾರ್ ಎಂಬುವವರ ವಿರುದ್ದ ದೂರು ದಾಖಲಿಸಿದ್ದಾರೆ.
೨೦೧೭ರಲ್ಲಿ  ಪಾರಮಾರ್ ಅವರ ಬಳಿಯಿಂದ  ವ್ಯವಹಾರದ ಸಂಬಂಧ ಒಟ್ಟು ೪೦ ಲಕ್ಷ ಹಣವನ್ನು ತಿಂಗಳಿಗೆ ಶೇ.೯ರ ಬಡ್ಡಿ ದರದಲ್ಲಿ ಪಡೆದಿದ್ದ.ಅಲ್ಲದೇ ೨೦೧೮ರ ಮಾರ್ಚ೨೧ರಿಂದ ಪ್ರತಿ ವಾರ ೯೮ ಸಾವಿರ ರೂ ನೀಡುವ ಸಂದರ್ಭದಲ್ಲಿ ವ್ಯವಹಾರದಲ್ಲಿ ನಷ್ಟ ಆದ ಪರಿಣಾಮ ಬೆಳಗಾವಿಯ ಪುಲ್ಟ್ರಾನ್ ಫೈನಾನ್ಸದಲ್ಲಿ ೩೦ ಲಕ್ಷ ಸಾಲ ಪಡೆದು ದಿ.೨೭-೦೫-೨೦೧೯ರಂದು ಪಾರಮಾರ್ ಅವರ  ಕಡೋಲ್ಕರ್ ಗಲ್ಲಿಯ ಯೂನಿಯನ್ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ ಮುಖಾಂತರ ಹಣ ವರ್ಗಾಯಿಸಿದ್ದರೂ ಮೇಲಿಂದ ಮೇಲೆ ೨೦ಲಕ್ಷ ಬಡ್ಡಿ ಹಾಗೂ ೪೦ ಲಕ್ಷ ಅಸಲು ಕೊಡಬೇಕೆಂದು ಕಿರುಕುಳ ನೀಡುತ್ತಿದ್ದರು.
ದಿ.೧೪-೦೧-೨೦೨೧ರಂದು ಸಂತೋಷ ಪರಮಾರ್ ಕೆಲ ಪುಡಿರೌಡಿಗಳ ಪಟಾಲಂ ಕಟ್ಟಿಕೊಂಡು ಬಂದು ವಾರದೊಳಗೆ ಪೂರ್ತಿ ೬೦ ಲಕ್ಷ ಕೊಡದಿದ್ದಲ್ಲಿ ಜೀವ ಸಹಿತ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಾರುಕಟ್ಟೆ ಠಾಣೆಯಲ್ಲಿ ದಿ.೨೨ರಂದು ಭಾಗವಾನ ದೂರು ನೀಡಿದ್ದಾರೆ.
ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button