Latest

ಮೊದಲ ಬಾರಿ ಪೇಪರ್ ಲೆಸ್ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊರೊನಾ ಭೀತಿಯಿಂದಾಗಿ ಇದೇ ಮೊದಲಬಾರಿಗೆ ಪೇಪರ್ ಲೆಸ್ ಬಜೆಟ್ ಮಂದನೆಗೆ ಸಿದ್ಧತೆ ನಡೆದಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಸಕ್ತ ಆರ್ಥಿಕ ವರ್ಷದ ಮುಂಗಡ ಪತ್ರ ಮಂಡಿಸಲಿದ್ದಾರೆ. ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿದ್ದು, ಮೇಡ್ ಇನ್ ಇಂಡಿಯಾ ಟ್ಯಾಬ್ ಮೂಲಕ ಆಯವ್ಯಯ ಮಂಡಿಸಲಿದ್ದಾರೆ.

ಹಿಂದೆ ಬ್ರಿಟೀಷ್ ಸಂಪ್ರದಾಯದಂತೆ ಬಜೆಟ್ ಪ್ರತಿಗಳನ್ನು ಬ್ರೀಫ್ ಕೇಸ್ ನಲ್ಲಿ ತರಲಾಗುತ್ತಿತ್ತು. ಆದರೆ 2019ರಲ್ಲಿ ಇದಕ್ಕೆ ಬ್ರೇಕ್ ಹಾಕಿರುವ ನಿರ್ಮಲಾ ಸೀತಾರಾಮನ್, ಬ್ರೀಫ್ ಕೇಸ್ ಬದಲು ಸ್ವದೇಶಿ ಬಹೀ ಖಾತಾ ತರಲು ಆರಂಭಿಸಿದರು. ಈ ಬಾರಿ ಕೊರೊನಾ ಕಾರಣದಿಂದಾಗಿ ಬಹೀ ಖಾತಾ ಬದಲು ಟ್ಯಾಬ್ ಮೂಲಕ ಬಜೆಟ್ ಮಂಡಿಸುತ್ತಿರುವುದು ವಿಶೇಷ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button