Latest

ಮಾಜಿ ಪ್ರಧಾನಿ ದೇವೇಗೌಡರಿಗೆ ಆಭಾರಿಯಾಗಿದ್ದೇನೆ ಎಂದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ, ತಮ್ಮ ಭಾಷಣದ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸ್ಮರಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರಿಗೆ ನಾನು ಆಭಾರಿಯಾಗಿದ್ದೇನೆ. ಅವರ ಜೀವನ ರೈತರಿಗೆ ಅರ್ಪಿತವಾಗಿದೆ. ನನಗೆ ದೇವೇಗೌಡರು ಉತ್ತಮ ಸಲಹೆ ನೀಡಿದ್ದಾರೆ. ಶೇ.88ರಷ್ಟು ರೈತರ ಬಳಿ ಕೇವಲ 2 ಹೆಕ್ಟೇರ್ ಗಿಂತ ಕಡಿಮೆ ಜಮೀನಿದೆ. ಕಡಿಮೆ ಜಮೀನು ಹೊಂದಿರೋ ರೈತರಿಗೆ ಸರ್ಕಾರದಿಂದ ಸಹಕಾರ ನೀಡಬೇಕು. ಸಣ್ಣ ರೈತರು ಬ್ಯಾಂಕ್ ಗಳಲ್ಲಿ ಖಾತೆಯನ್ನೇ ತೆರೆದಿರುವುದಿಲ್ಲ. ಹೀಗಾಗಿ ಸಾಲಮನ್ನಾದಿಂದ ಸಣ್ಣ ರೈತರು ವಂಚಿತರಾಗಿದ್ದಾರೆ ಎಂದಿದ್ದರು.

ಸಣ್ಣ ರೈತರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹೀಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಫಸಲ್ ಭೀಮಾ ಯೋಜನೆಯಿಂದಾಗಿ ರೈತರಿಗೆ ಅನುಕೂಲವಾಗಿದೆ. ರೈತ ಸಮುದಾಯಕ್ಕೆ 90 ಸಾವಿರ ಕೋಟಿ ನೀಡಲಾಗಿದೆ. ರೈತರ ಖಾತೆಗೆ ನೇರ ಹಣ ವರ್ಗಾವಣೆಯಾಗುತ್ತಿದೆ. ಈವರೆಗೆ 10 ಕೋಟಿ ರೈತರಿಗೆ ಹಣ ನೀಡಲಾಗಿದೆ ಎಂದರು.

ಇನ್ನು ರಾಷ್ಟ್ರಪತಿ ಭಾಷಣ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿತ್ತು. ಅಪರಿಚಿತ ಶತ್ರು ಕೊರೊನಾ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಡಿದೆ. ದೀಪ ಹಚ್ಚಲು ನೀಡಿದ್ದ ಕರೆಯನ್ನು ಕೆಲವರು ವ್ಯಂಗ್ಯ ಮಾಡಿದರು. ಕೋವಿಡ್ ವಿರುದ್ಧದ ಹೋರಾಟ
ಯಾವುದೇ ಪಕ್ಷ, ವ್ಯಕ್ತಿಗೆ ಸೇರಿದ್ದಲ್ಲ. ಕೋವಿಡ್ ಗೆ ಸ್ವದೇಶಿ ಲಸಿಕೆ ಕಂಡು ಹಿಡಿದಿದ್ದೇವೆ. ವಿಶ್ವಕ್ಕೆ ಅತೀ ಹೆಚ್ಚು ಲಸಿಕೆ ನೀಡಿರುವ ದೇಶ ಭಾರತ. ಇಂದು ಭಾರತದ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚಿದೆ. ಆಮ ನಿರ್ಭರ ಭಾರತ ನಿರ್ಮಾಣ ಅನಿವಾರ್ಯವಾಗಿದೆ. ದೇಶದಲ್ಲಿ ಅತೀ ಹೆಚ್ಚು ಯುವಕರಿದ್ದಾರೆ. ಇಂದಿನ ಯುವಕರೇ ನಾಳಿನ ದೇಶದ ಭವಿಷ್ಯ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button