Latest

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 50 ರೂ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದಲ್ಲಿ ಪ್ಟ್ರೋಲ್, ಡಿಸೆಲ್ ಬೆಲೆ ಗಗನಮುಖಿಯಾಗಿದೆ. ಒಂದೇ ಸಮನೆ ಏರುತ್ತಿದೆ. ಜನಸಾಮಾನ್ಯರೂ ತತ್ತರಿಸಿಹೊಗಿದ್ದಾರೆ. ಕೇಂದ್ರದ ಬಿಜೆಪಿ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಏನಾದರೂ ಮಾಡಿ ಪೆಟ್ರೋಲ್, ಡಿಸೆಲ್ ಬೆಲೆ ಇಳಿಸಿ, ಇಲ್ಲವಾದಲ್ಲಿ ಅದು ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರಿ ಜನಸಾಮಾನ್ಯರು ಬದುಕದ ಸ್ಥಿತಿಗೆ ತರುತ್ತದೆ ಎನ್ನುವ ಆಗ್ರಹ ಕೇಳಿಬರುತ್ತಿದೆ.

ಇಂತಹ ಬೇಸರದ ಸ್ಥಿತಿಯಲ್ಲಿರುವಾಗ ವಾಟ್ಸಪ್ ನಲ್ಲಿ ಬಂದ ಮೆಸೇಜ್ ನೋಡಿ ಜನರು ಖಷಿಯಿಂದ ಓದತೊಡಗಿದ್ದಾರೆ. ಆದರೆ ಆ ಖುಷಿ ಕೆಲವೇ ಸೆಕೆಂಡ್ ಗಳಲ್ಲಿ ಮಾಯವಾಗುತ್ತಿದೆ.

ಪೆಟ್ರೋಲ್ ಬಲೆ ಶೀಘ್ರ 50 ರೂ. ಆಗಲಿದೆ ಎನ್ನುವ ಮೆಸೇಜ್ ನೋಡಿ ಖುಷಿಪಟ್ಟು ಓಪನ್ ಮಾಡಿದರೆ…. ಅರ್ಧ ಲೀಟರ್ ಗೆ ಎಂದಿದೆ ಮುಂದಿನ ಲೈನ್ ನಲ್ಲಿ!

ಪೆಟ್ರೋಲ್ ರೇಟ್ ಸಂಬಂಧ ನಿತ್ಯ ನೂರಾರು ಇಂತಹ ಮೆಸೇಜ್ ಗಳು ಹರಿದಾಡುತ್ತಿವೆ. ಇದು ಮೇಲ್ನೋಟಕ್ಕೆ ಜೋಕ್ ನಂತೆ ಕಂಡರೂ ಅದರ ಹಿಂದಿರುವ ನೋವನ್ನು ಅರ್ಥ ಮಾಡಿಕೊಂಡು ರೇಟ್ ಇಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ ಎನ್ನುವ ಆಶಯವಿದೆ.

 ಇಂಧನ ಬೆಲೆ ಏರಿಕೆ ಸಂಬಂಧ   ಟ್ವೀಟ್ ಗಳು –

 

https://twitter.com/tripathi0504/status/1335783969074290689?ref_src=twsrc%5Etfw%7Ctwcamp%5Etweetembed%7Ctwterm%5E1335783969074290689%7Ctwgr%5E%7Ctwcon%5Es1_c10&ref_url=https%3A%2F%2Fenglish.sakshi.com%2Fnews%2Fbusiness%2Fpetrol-prices-hiked-five-straight-days-funny-memes-jokes-flood-twitter-127322

https://twitter.com/g48660305/status/1333618635470868480?ref_src=twsrc%5Etfw%7Ctwcamp%5Etweetembed%7Ctwterm%5E1333618635470868480%7Ctwgr%5E%7Ctwcon%5Es1_c10&ref_url=https%3A%2F%2Fenglish.sakshi.com%2Fnews%2Fbusiness%2Fpetrol-prices-hiked-five-straight-days-funny-memes-jokes-flood-twitter-127322

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button